ಕೃಷಿ ಭೂಮಿ ಸ್ವಾಧಿನ ನಿರ್ಧಾರ ಕೈಬಿಡಿ

protest
Published on

ಸರ್ಕಾರಕ್ಕೆ ಸಾಮಾಜಿಕ ಹೋರಾಟಗಾರ್ತಿ ಕವಿತಾ ರೆಡ್ಡಿ ಒತ್ತಾಯ

ಆನೇಕಲ್​: ಸರ್ಜಾಪುರ ಹೋಬಳಿಯ 11 ಗ್ರಾಮಗಳ ಫಲವತ್ತಾದ ರೈತರ ಕೃಷಿ ಭೂಮಿ ಸ್ವಾಧಿನ ನಿರ್ಧಾರ ಕೈಬಿಡುವಂತೆ ಮುತ್ತಾನಲ್ಲೂರಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರ 68 ದಿನ ಪೂರೈಸಿದ್ದು, ಸಾಮಾಜಿಕ ಹೋರಾಟಗಾರ್ತಿ ಕವಿತಾ ರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಸಾಥ್​ ನೀಡಿದರು.

ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರಿಗೆ ನೂಲಿನ ದಾರವನ್ನು ಅರ್ಪಿಸಲು ಸ್ವತ@ ತಾವೇ ಉಪವಾಸ ಕುಳಿತು ಚರಕದ ಮುಖಾಂತರ ನೂಲನ್ನು ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಯಾವುದೇ ಆಹಾರ ಮತ್ತು ನೀರನ್ನು ಸೇವಿಸದೆ ತೆಗೆದು ರೈತರಿಗೆ ಬೆಂಬಲ ಸೂಚಿಸಿದರು. ರೈತರ ಫಲವತ್ತಾದ ಭೂಮಿ ವಶಪಡಿಸಿಕೊಳ್ಳುವ ನಿರ್ಧಾರವನ್ನು ಸರ್ಕಾರ ಈ ಕೂಡಲೇ ಕೈಬಿಡಬೇಕೆಂದು ಕವಿತಾ ರೆಡ್ಡಿ ಒತ್ತಾಯಿಸಿದರು.

ಸಮಿತಿ ಗೌರವಾಧ್ಯಕ್ಷ ಹಂದೇನಹಳ್ಳಿ ರಾಮಚಂದ್ರರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಕೈಗಾರಿಕಾ ಪ್ರದೇಶಗಳು, ನಾಲ್ಕು ವಸತಿ ಬಡಾವಣೆಗಳಿಗಾಗಿ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಸ್ವಾಧಿನ ಮಾಡಿಕೊಂಡಿದೆ. ಅಳಿದುಳಿದ ಜಮೀನನಲ್ಲಿ ರೈತರು ಜೀವನ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಸ್ವಾಧಿನ ಪ್ರಕ್ರಿಯೆ ಕೈಬಿಡಬೇಕೆಂದರು.

ಮುತ್ತನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿಶ್ವನಾಥರೆಡ್ಡಿ ಮಾತನಾಡಿ, ಈ ಭಾಗದಲ್ಲಿ ಹಲವಾರು ಮೂಲ ಸೌಕರ್ಯಗಳು ಇಲ್ಲದೆ ಜನರು ಪರದಾಡುತ್ತಿದ್ದಾರೆ, ಬೆಂಗಳೂರು ನಗರಕ್ಕೆ ಹೋಗಬೇಕಾದರೆ ಎರಡು ಗಂಟೆಗಳ ಸಮಯ ಹಿಡಿಯಲಿದ್ದು, ಅಷ್ಟು ಒತ್ತಡದ ಪ್ರದೇಶವಾಗಿದೆ. ಈ ಭಾಗದಲ್ಲಿ ಕೈಗಾರಿಕೆ ಮಾಡದೆ ಉತ್ತರ ಕರ್ನಾಟಕದ ಭಾಗದಲ್ಲಿ ಬಹಳಷ್ಟು ಜಮೀನಿದ್ದು, ಆ ಜಾಗದಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸಲಿ ಎಂದರು.

ಕೆರೆಗಳು ಕಲುಷಿತತಾಲೂಕಿನಲ್ಲಿ ಇರುವ ಹಲವಾರು ಕೈಗಾರಿಕಾಗಳಿಂದ ನಮ್ಮ ಭಾಗದ ಎಲ್ಲ ಕೆರೆಗಳು ಕಲುಷಿತಗೊಂಡಿವೆ, ಪರಿಸರ ಕೂಡ ಹಾಳಾಗಿದೆ. ಈ ಭಾಗದ ಜನರಲ್ಲಿ ಮಾರಕ ರೋಗಗಳು ಕಾಣಿಸಿಕೊಂಡಿವೆ. ಕೈಗಾರಿಕೆಗಳಲ್ಲಿ ಸ್ಥಳಿಯರಿಗೆ ಯಾವುದೇ ಉದ್ಯೋಗ ನೀಡಿಲ್ಲ, ಆದ್ದರಿಂದ ಸರ್ಕಾರ ಆನೇಕಲ್​ ತಾಲೂಕಿನಲ್ಲಿ ಇನ್ನು ಮುಂದೆ ಯಾವುದೇ ಕೈಗಾರಿಕೆ ವಸತಿ ಬಡಾವಣೆಗಳಿಗೆ ಜಮೀನು ಭೂಸ್ವಾಧಿನ ಮಾಡಬಾರದು ಎಂದು ಸಮಿತಿಯ ಸಂಚಾಲಕರೂ ಆದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸತ ಡಾ.ಚಿನ್ನಪ್ಪ ವೈ.ಚಿಕ್ಕ ಹಾಗಡೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net