

ಪಾವಗಡ: ಪಟ್ಟಣದ ಕುಮಾರಸ್ವಾಮಿ ಬಡಾವಣೆಗೆ ಮಾಜಿ ಸಚಿವ ವೆಂಕಟರಮಣಪ್ಪ ಬಡಾವಣೆ ಎಂದು ಮರುನಾಮಕರಣ ಮಾಡುತ್ತಿರುವುದು ಕೈಬಿಡದ್ದಿದ್ದರೆ ನಿರಂತರ ಹೊರಾಟ ನಡೆಸಲಾವುದು ಎಂದು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಸಿದರು.
ಪಟ್ಟಣದ ಕುಮಾರಸ್ವಾಮಿ ಬಡಾವಣೆಯನ್ನು ಮಾಜಿ ಸಚಿವ ವೆಂಕಟರವಣಪ್ಪ ಬಡಾವಣೆ ಎಂದು ಮರುನಾಮಕರಣ ಮಾಡಲು ಪುರಸಭೆ ಮುಂದಾಗಿರುವ ನಡೆ ವಿರೋಧಿಸಿ ಮಂಗಳವಾರ ಪಟ್ಟಣದ ಪುರಸಭೆ ಕಚೇರಿ ಆವಣದಲ್ಲಿ ಜೆಡಿಎಸ್ನಿಂದ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಜೆಡಿಎಸ್ ಘಟಕದ ಅಧ್ಯಕ್ಷ ಎನ್.ಎ.ಈರಣ್ಣ ಮಾತನಾಡಿ,2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಬಡವರಿಗಾಗಿ 400 ಮನೆಗಳನ್ನು ನಿರ್ಮಿಸಿ, ಆ ಬಡಾವಣೆಗೆ ಕುಮಾರಸ್ವಾಮಿ ಬಡಾವಣೆ ಎಂದು ಹೆಸರಿಡಲಾಗಿತ್ತು. ಈಗ ರಾಜಕೀಯ ಪಿತೂರಿಯ ಹಿನ್ನೆಲೆಯಲ್ಲಿ ಹೆಸರನ್ನು ಮರುನಾಮಕರಣ ಮಾಡಲು ಹೊರಟಿರುವುದು ಖಂಡನೀಯ. ಪುರಸಭೆ ಅಧಿಕರಿಗಳು ಮತ್ತು ಸದಸ್ಯರು ಮರುನಾಮಕರಣವನ್ನು ತಕ್ಷಣಕ್ಕೆ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಪುರಸಭೆ ಮಾಜಿ ಸದಸ್ಯ ಮನುಮಹೇಶ್, ಜೆಡಿಎಸ್ ಘಟಕದ ಗೌರವಾಧ್ಯಕ್ಷ ರಾಜಶೇಖರಪ್ಪ ಹಾಗೂ ಗುಟ್ಟಳ್ಳಿ ಮಣಿ,
ಕಾರ್ಯಾಧ್ಯಕ್ಷ ಗೋವಿಂದ ಬಾಬು, ಗಂಗಾಧರ ನಾಯ್ಡು, ಕಾವಲಗೇರಿ ರಾಮಾಂಜಿ, ಗುಟ್ಟಹಳ್ಳಿ ಮಣಿ, ಗೋಪಾಲ, ಅಪ್ ಬಂಡೆ ಗೋಪಾಲ, ನಟರಾಜು, ಭರತ್, ರವಿ, ಈರಣ್ಣ ಗೌಡ, ಧರ್ಮಪಾಲ್, ಗಗನ್ ರಾಜ್, ಕೃಷ್ಣಮೂರ್ತಿ, ನಾರಾಯಣಪ್ಪ ಗಂಗಾಧರ್ ಹಾಗೂ ನೂರಾರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದರು.