

ಮಡಿಕೇರಿ: ಬ್ರೈನೋಬ್ರೈನ್ ಫೆಸ್ಟ್-೨೦೨೨ ರಾಜ್ಯಮಟ್ಟದ ೧೩೩ನೇ ಅಬಾಕಸ್ ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಸಂಸ್ಥೆ ವಿದ್ಯಾರ್ಥಿಗಳು ಚಾಂಪಿಯನ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ವಸಂತನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ಮಡಿಕೇರಿಯ ೩೭ ವಿದ್ಯಾರ್ಥಿಗಳು ಭಾಗವಸಿದ್ದರು. ೩ ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕ ಮಾಡುವ ಮೂಲಕ ೨೦ ಚಾಂಪಿಯನ್ ಟ್ರೋಫಿ, ೧೦ ಚಿನ್ನದ ಪದಕ ಹಾಗೂ ೭ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಶೇಕಡವಾರು ಚಾಂಪಿಯನ್ ಟ್ರೋಫಿ ಪಡೆದ ಸಾಲಿನಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಸಂಸ್ಥೆ ಮೊದಲನೇ ಸ್ಥಾನ ಪಡೆದುಕೊಂಡಿತು. ಬೆಸ್ಟ್ ಫ್ಯಾಕಲ್ಟಿ ಅವಾರ್ಡ್ ಹಾಗೂ ಬೆಸ್ಟ್ ಫ್ರಾಂಚೈಸಿ ಅವಾರ್ಡ್ ಅನ್ನು ಸಂಸ್ಥೆಯ ವ್ಯವಸ್ಥಾಪಕಿ ಮಾಪಂಗಡ ಕವಿತಾ ಕರುಂಬಯ್ಯ ಪಡೆದುಕೊಂಡರು.
ಈ ಸಂದರ್ಭ ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಮ್, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಮ್, ಪ್ರಾದೇಶಿಕ ನಿರ್ದೇಶಕ ನೀಲ್ ಕಮಲ್ ಹಾಜರಿದ್ದರು.
ಸ್ಪರ್ಧೆಯಲ್ಲಿ ೫ ವರ್ಷದಿಂದ ೭ ವರ್ಷದ ವಿಭಾಗದಲ್ಲಿ ಭಾಗವಹಿಸಿದ ಸಂಸ್ಥೆಯ ೫ ವರ್ಷದ ಎಚ್.ಜೆ. ಚೇತಸ್ ಮತ್ತು ಕೊಡಂದೆರ ನುಷ್ಕ ಅತಿ ಚುರುಕಾಗಿ ಲೆಕ್ಕ ಮಾಡುವ ಮೂಲಕ ಇಂಟರ್ ನ್ಯಾಷನಲ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಮ್ ಅವರ ಪ್ರಶಂಸೆಗೆ ಪಾತ್ರರಾದರು.
ಚಾಂಪಿಯನ್ ಟ್ರೋಫಿ ವಿಜೇತರು
ಬಿ.ಎಂ. ಆರವ್ ಬೋಪಣ್ಣ, ಟಿ.ಬಿ.ಅಫ್ಘಾನ್ ಅಹಮ್ಮದ್, ಎಸ್.ಐಶ್ವರ್ಯ, ಅನ್ಶೀಲ್ ಲೋಬೋ, ಅಪೇಕ್ಷಾ ಆರ್. ರೈ, ಎನ್.ಕೆ.ಚಹನ, ಎಚ್.ಜೆ. ಚೇತಸ್, ದೃತಿ ಜೆ. ಪೂಜಾರಿ, ಎಂ.ಸಿ. ಗೌರವ್, ಡಬ್ಲ್ಯೂ.ವಿ. ಕುನಾಲ್ ಪ್ರಸಾದ್, ಜಿ.ವಿ. ಲಿಕಿತ್, ಡಿ.ಎಂ. ಮೀನಾಕ್ಷಿ, ಎನ್. ನಿರನ್ ಪೂವಣ್ಣ, ನಾಪಂಡ ನೀಶ ಪೂವಣ್ಣ, ನುಷ್ಕ ಕೊಡಂದೆರ, ನೈಷ ನಾಚಯ್ಯ ಪಾಲೆಕಂಡ, ಪ್ರತ್ಯೂಶ ಎಂ.ಸುವರ್ಣ, ಟಿ.ಎಂ. ಪ್ರೀತಮ್, ಪಿ.ಎಂ. ಪುನಿತ, ಎ.ವೈ. ತ್ರೀಷ ಚಾಂಪಿಯನ್ ಟ್ರೋಫಿ ಪಡೆದುಕೊಂಡಿದ್ದಾರೆ.
ಚಿನ್ನದ ಪದಕ ವಿಜೇತರು
ಪಿ.ಅನ್ವಿ, ಪಿ.ಕೆ. ಕೃಷ್ಣ ಪ್ರಿಯ, ಕೆ.ಸಿ. ಲಾಸ್ಯ, ಕೆ.ಸಿ. ಲಕ್ಷ್ಯ, ಡಿ.ಎ. ಮೊಹಮ್ಮದ್ ಅಧ್ಯಾನ್, ಎಂ.ಎಸ್. ನಿತೀಶ್, ಎಸ್.ಪಿ. ಪ್ರಣತಿ, ಬಿ.ಪಿ. ರಕ್ಷ್ ಪೊನ್ನಣ್ಣ, ಎ.ಎಫ್. ಸೋಹ ಫಾತೀಮ, ಟಿ.ಪಿ.ನಿಧಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಬೆಳ್ಳಿ ಪದಕ ವಿಜೇತರು
ಎಂ..ಪೂರ್ವಿತ್, ಅರ‌್ನ ಕುಶಾಲಪ್ಪ, ಡಿ.ಎನ್. ದೀಷ್ಣ, ಪಿ.ಕೆ. ಸಂಜನ, ಪಿ.ಕೆ. ಶ್ಯಾಮ್ ಸುಂದರ್, ಟಿ.ಪಿ.ನಿತ್ಯ, ತನ್ಮು ಡಿ.ಮಹೇಶ್ ಬೆಳ್ಳಿ ಪದಕ ಪಡೆದುಕೊಂಡರು.