

ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐ ಕ್ಯೂ ಎ ಸಿ ಅಡಿಯಲಿ ಅಬಕಾರಿ ಇಲಾಖೆ ಗದಗ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಬಕಾರಿ ಉಪ ಅಧೀಕ್ಷಕರು ಗದಗ ಉಪ ವಿಭಾಗ ಶ್ರೀ ಬಿ ಮಠಪತಿಯವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾದಕ ವ್ಯಸನಕ್ಕೆ ಒಳಗಾಗುವುದು ಸುಲಭ ಅದರಿಂದ ಹೊರಬರುವುದು ಕಷ್ಟ. ಮನುಕುಲ ಉದ್ಧಾರಕ್ಕೆ ಮಾದಕ ವ್ಯಸನದ ವಿರೋಧ ಈ ದಿನದ ಮುಖ್ಯ ಉದ್ದೇಶವಾಗಿದೆ.ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧ ದಿನಾಚರಣೆಯ ಸಂದರ್ಭದಲ್ಲಿ ಶ್ರೀ ತಾವರ್ ಚಂದ್ ದೆಹಲೋಟ್ ಅವರು ನಶಾಮುಕ್ತ ಭಾರತ ಅಭಿಯಾನದ ಜಾಲತಾಣಕ್ಕೆ ಚಾಲನೆ ನೀಡಿದರು ದೇಶದಲ್ಲಿ 60 ದಶಲಕ್ಷಕ್ಕೂ ಹೆಚ್ಚು ಮಾದಕ ವ್ಯಸನಿಗಳಿದ್ದಾರೆ, ಅದರಲ್ಲಿ ಹೆಚ್ಚಿನವರು 10 ರಿಂದ 17 ವರ್ಷ ವಯಸ್ಸಿನವರು ವ್ಯಸನಿಗಳಿದ್ದಾರೆ. ಐದು ನೂರಕ್ಕಿಂತ ಹೆಚ್ಚು ಸೇವಾ ವಲಯಗಳು ಈ ಒಂದು ಕಾರ್ಯದಲ್ಲಿ ಪಾಲ್ಗೊಂಡಿವೆ.ಇದು ದೇಶದ ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.ಅಬಕಾರಿ ಇಲಾಖೆಯಿಂದ ಮಾದಕ ಸೇವನೆಯನ್ನು ನಿಷೇಧಿಸಲು ಹಲವಾರು ಭಾವಚಿತ್ರಗಳು ಮತ್ತು ಸಂಬಂಧಿತ ವಾಕ್ಯಗಳನ್ನು ಮತ್ತು ಚಲನಚಿತ್ರಗಳ ಮೂಲಕ ಜನರಲ್ಲಿ ಅರಿವನ್ನು ಮೂಡಿಸುತ್ತಾ ಇದೆ ಡ್ರಗ್ಸ್ ವ್ಯಕ್ತಿಯ ಆಲೋಚನಾ ಸಾಮರ್ಥ್ಯ ಮತ್ತು ಕ್ರಿಯೆಯನ್ನು ಮೀರಿಸುತ್ತದೆ.
ಈ ಪಿಡುಗನ್ನು ಹೋಗಲಾಡಿಸಲು ಇಲಾಖೆಯವರ ಜೊತೆಗೆ ಜನರ ಸಹಕಾರವು ಬಹು ಮುಖ್ಯ.ಸರಿಸುಮಾರು ಎರಡು ನೂರು ಮಿಲಿಯನ್ ಜನರು ಕೋಕೈನ್, ಕ್ಯಾನಬಿಸ್, ನಿದ್ರಾಜನಕದಂತಹ ಮಾದಕ ದ್ರವ್ಯಗಳ ಸೇವನಿಗೆ ಒಳಗಾಗಿದ್ದು ಈ ದುಶ್ಚಟಗಳು ವ್ಯಕ್ತಿಯ ಅಂತ್ಯಕ್ಕೆ ಕಾರಣವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ಕೆ ಗಿರಿರಾಜ ಕುಮಾರ ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಅಬಕಾರಿ ನಿರೀಕ್ಷಣಾಧಿಕಾರಿಗಳಾದ ಶ್ರೀ ಪರಶುರಾಮ್ ಎಚ್ ವಿ ,ಶ್ರೀ ಶರಣಪ್ಪ ಕರಡಿ ಶ್ರೀ ಮಹೇಶ್ ಕುಂಬಾರ್ ಶ್ರೀ ಮಹೇಶ್ ಚೌದರಿ ಶ್ರೀ ಗುರುರಾಜ್ ಎಸ್ ವಸ್ತ್ರದ್ ಶ್ರೀ ಚಂದ್ರು ರಾಠೋಡ್ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ ಬಾಹುಬಲಿ ಪಿ ಜೈನರ ವಿದ್ಯಾರ್ಥಿ ಪ್ರತಿನಿಧಿ ಕು ಮನೋಜ್ ಕುಮಾರ್ ಧಲಬಂಜನ್ ಶ್ರೀ ಆದಿತ್ಯ ಜೋಶಿ ಶ್ರೀ ಶಿವು ಕಣವಿ ಮಹಾವಿದ್ಯಾಲಯದ ಸ್ವಯಂಸೇವಕ ಸೇವಕರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕು ಅಶ್ವತ್ಥ ಚೌವಡಿ ಕು ಆದರ್ಶ್ ಅಕ್ಕಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಬಗ್ಗೆ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು ಅಬಕಾರಿ ನಿರೀಕ್ಷಕರಾದ ಶ್ರೀ ಮಹೇಶ್ ಚೌದರಿ ಅವರು ಸ್ವಯಂಸೇವಕ ಸೇವಕರಿಗೆ ಪ್ರಮಾಣ ವಚನ ಬೋಧಿಸಿದರು.