

ಮಡಿಕೇರಿ:
ಮಡಿಕೇರಿಯ ಬ್ರೆöÊನೋಬ್ರೆöÊನ್ ಕೇಂದ್ರದ ವತಿಯಿಂದ ಅಬಾಕಸ್ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಪದವಿ ಪ್ರದಾನ ಮಾಡಲಾಯಿತು. ಕೇಂದ್ರದ 21ನೇ ಬ್ಯಾಚ್ ನ ಒಟ್ಟು 22 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
ಎರಡೂವರೆ ವರ್ಷ 10 ಹಂತಗಳಿರುವ ಅಬಾಕಸ್ ಕೋರ್ಸ್ನ್ನು ಈ ವಿದ್ಯಾರ್ಥಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ. ಅಂತಾರಾಷ್ಟಿçÃಯ ಬ್ರೆöÊನೋಬ್ರೆöÊನ್ ಸಂಸ್ಥೆಯ ಕರ್ನಾಟಕ ಬ್ರೆöÊನೋಬ್ರೆöÊನ್ ಕಿಡ್ಸ್ ಅಕಾಡೆಮಿಯ ಪ್ರಾದೇಶಿಕ ವ್ಯವಸ್ಥಾಪಕÀ ನೀಲ್ ಕಮಾಲ್ ಸ್ವರ್ಣಕರ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ ಇಲ್ಲಿಯವರಿಗೆ ಮಡಿಕೇರಿ ಕೇಂದ್ರದಿAದ ಒಟ್ಟು 700 ವಿದ್ಯಾರ್ಥಿಗಳು ಪದವಿ ಸ್ವೀಕಾರ ಮಾಡಿದ್ದಾರೆ.
ಕರ್ನಾಟಕ ರಾಜ್ಯದ ಇತರ ಬ್ರೆöÊನೋಬ್ರೆöÊನ್ ಕೇಂದ್ರಗಳಲ್ಲೇ ಮಡಿಕೇರಿ ಕೇಂದ್ರದ ಅಬಕಾಸ್ ವಿದ್ಯಾರ್ಥಿಗಳನ್ನು ಅವರ ಶಿಸ್ತು ಪರಿಪಾಲನೆ, ಕ್ರಮಬದ್ಧವಾದ ಕಲಿಕೆಯಿಂದಲೇ ಗುರುತಿಸಲಾಗುತ್ತದೆ. ಇದೇ ಕಾರಣಕ್ಕೆ ಈ ಕೇಂದ್ರದ ವಿದ್ಯಾರ್ಥಿಗಳು ಬೇರೆ ಕೇಂದ್ರದ ಮಕ್ಕಳಿಗೆ ಮಾದರಿಯಾಗಿದ್ದಾರೆ. ಬೇರೆ ಕೇಂದ್ರಗಳಿಗೆ ಹೋಲಿಸಿದರೆ ಈ ಬಾರಿ ಮಡಿಕೇರಿ ಕೇಂದ್ರದಿAದ ಹೆಚ್ಚಿನ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಈ ಬ್ಯಾಚ್‌ನಲ್ಲಿ 4.5 ವರ್ಷದ ನುಷ್ಕ ಹಾಗೂ ಚೇತಸ್ ರಾಜ್ಯ ಮತ್ತು ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಾಂಪಿಯನ್ ಆಗಿದ್ದಾರೆ. ಮಡಿಕೇರಿ ಕೇಂದ್ರದ ಧೃತಿ ಜೆ.ಪೂಜಾರಿ ದುಬೈನಲ್ಲಿ ನಡೆದ ಅಂತರಾಷ್ಟಿçÃಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಾಂಪಿಯನ್ ಆಗಿದ್ದಾರೆ. ಈಕೆ ಅಂತಾರಾಷ್ಟಿçÃಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಡಿಕೇರಿ ಕೇಂದ್ರದ ಪ್ರಥಮ ವಿದ್ಯಾರ್ಥಿನಿಯಾಗಿದ್ದಾಳೆ ಎಂದು ತಿಳಿಸಿದರು.
ಮಡಿಕೇರಿ ಬ್ರೆöÊನೋಬ್ರೆöÊನ್ ಕೇಂದ್ರದ ಮುಖ್ಯಸ್ಥೆ ಮಾಪಂಗಡ ಕವಿತಾ ಕರುಂಬಯ್ಯ ಮಾತನಾಡಿ ಮಕ್ಕಳಲ್ಲಿ ಸ್ಮರಣ ಶಕ್ತಿ, ಕಲ್ಪನಾ ಶಕ್ತಿ, ಆತ್ಮವಿಶ್ವಾಸ, ಚುರುಕುತನ, ಬಹುಕಾರ್ಯ ಕೌಶಲ್ಯ, ಛಾಯಾಗ್ರಹಣ ಶಕ್ತಿ ಹೆಚ್ಚಾಗುವುದರೊಂದಿಗೆ ಮಕ್ಕಳ ಕನಸಿಗೆ ರೆಕ್ಕೆ ಸಿಕ್ಕಂತಾಗಿದೆ ಎಂದರು.
ಅಭಿಪ್ರಾಯ ಹಂಚಿಕೊAಡ ವಿದ್ಯಾರ್ಥಿಗಳು ಅಬಾಕಸ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಕನ್ನಂಡ ಡಾ.ಅಯ್ಯಪ್ಪ ಹಾಗೂ ಮಾಪಂಗಡ ಮೋಹನ್ ಕರುಂಬಯ್ಯ ಅವರು ಕೊಡಗಿನ ಸಾಂಪ್ರಾದಾಯಿಕ ಸ್ಮರಣಿಕೆೆಯನ್ನು ನೀಲ್ ಕಮಾಲ್ ಸ್ವರ್ಣಕರ್ ಅವರಿಗೆ ನೀಡಿ ಗೌರವಿಸಿದರು.