‘ಆಯುಷ್ಮಾನ್ ಭಾರತ’ ಮನ್ನಣೆ

vinod kulkarni
Published on

ಹುಬ್ಬಳ್ಳಿ:ವಿದ್ಯಾನಗರದ ಮಾನಸ ಮನೋ ವೈದ್ಯಕೀಯ ಸಂಸ್ಥೆಯು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಆರೋಗ್ಯ ವಿಮೆ ಯೋಜನೆಗೆ ಒಳಪಟ್ಟಿದೆ ಎಂದು ಸಂಸ್ಥೆಯ ಡಾ. ವಿನೋದ ಕುಲಕರ್ಣಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮನ್ನಣೆ ಪಡೆದ ಕರ್ನಾಟಕದ 2ನೇ ಮನೋ ರೋಗಿಗಳ ಖಾಸಗಿ ಚಿಕಿತ್ಸಾ ಕೇಂದ್ರವಾಗಿದೆ. ಕರ್ನಾಟಕ ಸರ್ಕಾರದಿಂದ ಶುಕ್ರವಾರದಂದು ಈ ಸಂಬಂಧ ಅಧಿಕೃತ ಆದೇಶವಾಗಿದೆ. ಈ ಮನ್ನಣೆಗೆ ಅನೇಕ ಲೈಸನ್ಸ್​ಗಳನ್ನು ಹೊಂದಬೇಕಾಗುತ್ತದೆ. ಪುತ್ರ ಡಾ. ಅಲೋಕ ಕುಲಕರ್ಣಿ ಪ್ರಯತ್ನದಿಂದ ಇದನ್ನು ಪಡೆಯಲು ಸಾಧ್ಯವಾಯಿತು ಎಂದರು.

ಮನೆ ಕಾಯಿಲೆಗಳಾದ ಆತಂಕ, ನಿದ್ರಾಹೀನತೆ, ಖಿನ್ನತೆ, ಮತಿಭ್ರಾಂತಿ, ಮದ್ಯವ್ಯಸನ, ಮಾದಕ ವಸ್ತುಗಳ ಸೇವನೆ, ಯಾವುದೇ ತರಹದ ಮನೋ , ನರ ರೋಗಗಳಿಗೆ ಆಯುಷ್ಮಾನ್ ಕಾರ್ಡ್ ಹೊಂದಿದವರು ನಮ್ಮಲ್ಲಿ ಇನ್ನು ಮುಂದೆ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಐಎಂಎ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ಸುಭಾಸ ಬಬ್ರುವಾಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net