ಆಯುರ್ವೇದ ಕಾಲೇಜಿಗೆ ಪಂಡಿತರ ಭೇಟಿ

IMG_20230902_204525_184-1.jpg
Published on

ಹುಬ್ಬಳ್ಳಿ: ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ನಿಮಿತ್ತ ಹಳೇಹುಬ್ಬಳ್ಳಿ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಪಂಡಿತ ನರಹರಿ ಆಚಾರ್ಯ ವಾಳ್ವೇಕರ ಅವರು ಅಲ್ಲಿನ ರೋಗಿಗಳಿಗೆ ಗುರು ರಾಯರ ಫಲ ಮಂತ್ರಾಕ್ಷತೆ ನೀಡಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.

ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್., ಡಾ. ಮಧುಸೂದನ ಕುಲಕರ್ಣಿ, ಡಾ. ಎಸ್.ಎ. ಪಾಟೀಲ, ವಾದಿರಾಜ ಕುಲಕರ್ಣಿ, ಡಾ. ವಿಜಯ ಮಠ, ಸಂದೀಪ ರಿತ್ತಿ, ಶ್ರೀನಾಥ ಕಟ್ಟಿ, ಸಂಜೀವ ರಾಯಚೂರ, ಚ್ಯೆತನ್ಯ ಜಿ, ರಾಘವೇಂದ್ರ ಉಪಸ್ಥಿತರಿದ್ದರು. ಹರೀಶ್ ರಿತ್ತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net