

ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಮಂಗಳೂರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 169 ನೇ ಜಯಂತಿಯನ್ನು ಸಂಘದ ಪ್ರಧಾನ ಕಚೇರಿಯಲ್ಲಿ ಆಚರಿಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಮಹಿಳಾ ಸಿಬ್ಬಂದಿ ಭಜನೆ ಹಾಗೂ ಕುಣಿತ ಭಜನೆ ನಡೆಸಿಕೊಟ್ಟರು. ಪುರೋಹಿತರಾದ
ಮನೋಜ್ ಶಾಂತಿ ಅವರು ಗುರುಪೂಜೆ ನಡೆಸಿ ಪ್ರಸಾದ ವಿತರಿಸಿದರು.
ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಉಪಾಧ್ಯಕ್ಷ ನೇಮಿರಾಜ್ ಪಿ , ನಿರ್ದೇಶಕರುಗಳಾದ ಜಿ. ಪರಮೇಶ್ವರ್ ಪೂಜಾರಿ,
ಆನಂದ ಎಸ್. ಕೊಂಡಾಣ, ರಮಾನಾಥ್ ಸನಿಲ್, ಬಿ.ಪಿ ದಿವಾಕರ್, ಗೋಪಾಲ್ ಎಂ,ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ವಾಮನ್ ಕೆ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.