

ಮಡಿಕೇರಿ:
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಭಾನುವಾರ ಮಡಿಕೇರಿಯಲ್ಲಿ ‘ಆಟಿಪರ್ವ’ ಆಟಿ ಸಂಭ್ರಮ ಆಚರಿಸಿಲಾಯಿತು. ದೀಪ ಬೆಳಗಿಸಿ ಶಂಖನಾದದೊAದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೀಣಾ ಹೊಳ್ಳ, ಲಕ್ಷ್ಮೀಭಟ್ ಹಾಗೂ ಸುಧಾ ಪ್ರಸಾದ್ ಭಗವದ್ಗೀತೆ ಪಠಿಸಿದರು.
ಮಾತೆಯರು 33 ಹಣತೆಗಳನ್ನು ಹಚ್ಚಿರುವುದು ಪುಣ್ಯ ಮಾಸದಲ್ಲಿ ವಿಶೇಷವಾಗಿತ್ತು. ಮಳೆ ಬಗ್ಗೆ ಇದೇ ವೇಳೆ ಕವನ ವಾಚನ ನಡೆಸಲಾಯಿತು. ಮನರಂಜನಾ ಆಟಗಳು, ನೃತ್ಯ, ಹಾಡು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ಕೊಡಗಿನ ಖಾದ್ಯಗಳಾದ ಪತ್ರೊಡೆ, ಕಣಿಲೆ ಖಾದ್ಯ, ಕಣಿಲೆ ಫ್ರೈಡ್ ರೈಸ್, ಹಲಸಿನ ಹಣ್ಣಿನ ಬನ್ಸ್, ಹಲ್ವಾ, ಕೈ ಹುಳಿ ಗೊಜ್ಜು, ಮಾವಿನ ಹಣ್ಣಿನ ಖಾದ್ಯ, ಆಟಿ ಸೊಸ್ಪಿನ ಪಾಯಸ, ಕಣಿಲೆ ವಡೆ ಹೀಗೆ ಹಲವಾರು ಬಗೆಯ ಖಾದ್ಯಗಳನ್ನು ಪ್ರದರ್ಶಿಸಲಾಗಿತ್ತು. ಭೋಜನಕ್ಕೆ ಕೊಡಗಿನ ಮಳೆಗಾಲದ ಖಾದ್ಯವನ್ನೇ ತಯಾರಿಸಿದ್ದು ವಿಶೇಷವಾಗಿತ್ತು.
ನಿಧಿಯ ಆಡಳಿತ ಮಂಡಳಿಯ ಕಾರ್ಯದರ್ಶಿ ಅರುಣ್ ಕುಮಾರ್, ಕೋಶಾಧಿಕಾರಿ ಗೀತಾಗಿರೀಶ್, ಪದಾಧಿಕಾರಿಗಳಾದ ರವಿಶಂಕರ್, ಭರತೇಶ್ ಖಂಡಿಗೆ. ಸವಿತಾ ಭಟ್, ಲಲಿತಾ ರಾಘವನ್, ಜಯಶೀಲಾ ಪ್ರಕಾಶ್, ಪ್ರಭಾಕರ ನೆಲ್ಲಿತ್ತಾಯ, ಯೋಗೇಶ್ ಪಡಂತಾಯ ಇದ್ದರು.