

ಪಡುಬಿದ್ರಿ: ಔಷಧೀಯ ಗುಣವುಳ್ಳ ಆಹಾರ ಖಾದ್ಯಗಳ ಸೇವನೆಯ ಅಗತ್ಯವನ್ನು ತಿಳಿಯುವಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಇಂದಿನ ಸವಾಜದ ಅಗತ್ಯತೆಯಾಗಿದೆ ಎಂದು ಉಡುಪಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಗೌರವಾಧ್ಯಕ್ಷೆ ಎರ್ವಾಳು ಶೀಲಾ ಕೆ. ಶೆಟ್ಟಿ ಹೇಳಿದರು.
ಎರ್ವಾಳು ಶ್ರೀನಿಧಿ ಮಹಿಳಾ ಮಂಡಲದಲ್ಲಿ ಶನಿವಾರ ಆಯೋಜಿಸಿದ್ದ ಆಟಿಡೊಂಜಿ ದಿನ ಸವಾರಂಭ ಉದ್ಘಾಟಿಸಿ ವಾತನಾಡಿದರು.
ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ವಾಲಿನಿ ಶೆಟ್ಟಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಅವರು ಚೆನ್ನೆಮಣೆ ಆಟದ ಮೂಲಕ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.
ಎರ್ವಾಳು ಶ್ರೀನಿಧಿ ಮಹಿಳಾ ಮಂಡಲ ಅಧ್ಯಕ್ಷೆ ರೇಖಾ ಶೆಟ್ಟಿ, ಕೋಶಾಧಿಕಾರಿ ವಿಮಲಾ ಕೆ.ಸಾಲಿಯಾನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಮಣಿ ಕುಂದರ್ ವಂದಿಸಿದರು. ವಾಜಿ ಅಧ್ಯಕ್ಷೆ ಜ್ಯೋತಿ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.