

ಪಡುಬಿದ್ರಿ: ಆಟಿ ತಿಂಗಳು ಹಾಳಲ್ಲ ಅದು ನಮ್ಮ ಬಾಳು ಬೆಳಗಿಸುವ ತಿಂಗಳು, ನಮ್ಮೆಲ್ಲರ ಉದ್ಧಾರಕ್ಕೆ ಅದು ಹೆದ್ದಾರಿ ಎಂದು ಅನಿವಾಸಿ ಭಾರತೀಯ ಉದ್ಯೋಗಿ ಮಲ್ಲಾರ್ ಶಶಿಧರ ಶೆಟ್ಟಿ ಅಭಿಪ್ರಾಯಪಟ್ಟರು.
ಕಾಪು ಬಂಟರ ಸಂಘದ ಮಹಾಸಭೆ ಹಾಗೂ ಮಹಿಳಾ ವಿಭಾಗ, 12 ಗ್ರಾಮಗಳ ಬಂಟ ಬಂಧುಗಳ ಸಮಾಗಮ ಮತ್ತು ಸಹಕಾರದೊಂದಿಗೆ ಕಾಪು ಲಕ್ಷ್ಮೀ ಜನಾರ್ದನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆಟಿಯ ನೆನಹು ಮತ್ತು ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂಬೈ ಉದ್ಯಮಿ ಉದಯ ಸುಂದರ ಶೆಟ್ಟಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಕಿರಿಯರಿಗೆ ಸಂಸ್ಕೃತಿಯ ದರ್ಶನ ಮಾಡಿದಂತಾಗುತ್ತದೆ ಎಂದರು. ಆಟಿ ತಿಂಗಳ ಬಗ್ಗೆ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಶೆಟ್ಟಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 12 ಗ್ರಾಮಗಳ ವಿದ್ಯಾರ್ಥಿಗಳಿಗೆ ದಿ.ರಾಧಾ ಸುಂದರ ಶೆಟ್ಟಿ ಸ್ಮರಣೆಯಲ್ಲಿ ಮನೋಹರ ಎಸ್.ಶೆಟ್ಟಿ ಅವರು ವಿದ್ಯಾರ್ಥಿವೇತನ ವಿತರಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ರಿತಿಕಾ ಆರ್.ಶೆಟ್ಟಿಗೆ ಡಾ.ಪ್ರಭಾಕರ್ ಸ್ಮಾರಕ ಚಿನ್ನದ ಪದಕವನ್ನು ಡಾ.ಪ್ರಶಾಂತ್ ಶೆಟ್ಟಿ ನೀಡಿ ಅಭಿನಂದಿಸಿದರು.
ಸಂಘದ ಅಧ್ಯಕ್ಷ ಪಿ.ರವಿರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಿರ್ಮಲ್‌ಕುಮಾರ್ ಹೆಗ್ಡೆ, ಶ್ರೀಕರ ಶೆಟ್ಟಿ ಕಲ್ಯಾ, ಮಮತಾ ಶೆಟ್ಟಿ, ಶಾಂತಲತಾ ಎಸ್.ಶೆಟ್ಟಿ, ಭಾನು ಶೆಟ್ಟಿ, ವಿನೋದ ಆರ್.ಶೆಟ್ಟಿ ಉಪಸ್ಥಿತರಿದ್ದರು.
ಸಾರಿಕಾ ಶೆಟ್ಟಿ ತುಳು ಒಗಟುಗಳ ಸ್ಪರ್ಧೆಯನ್ನು ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಯೋಗೇಶ್ ಶೆಟ್ಟಿ ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕೋಶಾಧಿಕಾರಿ ದಿವಾಕರ ಡಿ.ಶೆಟ್ಟಿ ಕಳತ್ತೂರು ಲೆಕ್ಕಪತ್ರ ಮಂಡಿಸಿದರು. ಕಳತ್ತೂರು ಸುಮಾ ಎನ್.ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರತಿಮಾ ವಿ.ಶೆಟ್ಟಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಮಹಿಳಾ ಘಟಕದ ಸಂಚಾಲಕಿ ಜಯಲಕ್ಷ್ಮೀ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಕವಿತಾ ಶೆಟ್ಟಿ ಉಳಿಯಾರಗೋಳಿ ವಂದಿಸಿದರು. ಮಾಲಿನಿ ಶೆಟ್ಟಿ ಇನ್ನಂಜೆ ಹಾಗೂ ಅನಿತಾ ಶೆಟ್ಟಿ ಉಳಿಯಾರಗೋಳಿ ನಿರೂಪಿಸಿದರು.