ಪಾದೆಬಂಬಿಲದಲ್ಲಿ ಆಟಿದ ಕೂಟ

Kdb_Aati-koota-1
Published on

ಕಡಬ: ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾ ಭಜನಾ ಮಂಡಳಿಯ ವತಿಯಿಂದ ಭಜನಾ ಮಂದಿರದ ಆವರಣದಲ್ಲಿ ಆಟಿದ ತೆನಸ್‌ಲ್ ಬೊಕ್ಕ ವಣಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಹಿರಿಯರಾದ ಕೊರಗಪ್ಪ ಗೌಡ ಅಂಗಡಿಮೂಲೆ ಚಾಲನೆ ನೀಡಿದರು. ದೈವ ಮಧ್ಯಸ್ಥ ಕೆ.ಬಾಲಕೃಷ್ಣ ಪೂಜಾರಿ ಪಲ್ಲತ್ತಾರು ಆಟಿ ತಿಂಗಳ ವೈಶಿಷ್ಟೃ ಹಾಗೂ ಮಹತ್ವದ ಬಗ್ಗೆ ತಿಳಿಸಿದರು.

ಒಡಿಯೂರು ಗ್ರಾಮ ವಿಕಾಸ ಯೋಜನೆಯ ಕಡಬ ತಾಲೂಕು ಸಂಯೋಜಕಿ ಕಾವ್ಯಲಕ್ಷ್ಮೀ ಶುಭಹಾರೈಸಿದರು. ಹಿರಿಯರಾದ ಗಂಗಯ್ಯ ಗೌಡ ಪರಣೆ, ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಅಂಗಡಿಮೂಲೆ, ಭಜನಾ ಮಂದಿರದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ, ಸ್ಥಾಪಕಾಧ್ಯಕ್ಷ ಸೋಮಪ್ಪ ಗೌಡ ಜಾರಿಗೆತ್ತಡಿ, ಜತೆ ಕಾರ್ಯದರ್ಶಿ ಬಾಲಕೃಷ್ಣ ಬಿ.ಕೆ ಮೊದಲಾದವರು ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಕೋಶಾಧಿಕಾರಿ ಪುಟ್ಟಣ್ಣ ಪರಣೆ ಸ್ವಾಗತಿಸಿದರು. ಕಾರ್ಯದರ್ಶಿ ಹೊನ್ನಪ್ಪ ಗೌಡ ಜಾರಿಗೆತ್ತಡಿ ವಂದಿಸಿದರು. ಸದಸ್ಯೆ ವಾಣಿಶ್ರೀ ಎ.ಎಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net