ಸಂಘ ಸಂಸ್ಥೆಗಳಿಂದ ಆಷಾಢ ಜನಪ್ರಿಯ: ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಆಟಿಡೊಂಜಿ ದಿನದಲ್ಲಿ ರಾಮಚಂದ್ರ ಅಭಿಪ್ರಾಯ

aati
Published on

ಬೆಳ್ಮಣ್: ನಂದಳಿಕೆ ಅಬ್ಬನಡ್ಕ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ನಂದಳಿಕೆಯ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಭಾನುವಾರ ಆಟಿಡೊಂಜಿ ದಿನ ನಡೆಯಿತು.

ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ನಂದಳಿಕೆ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬರೆಪ್ಪಾಡಿ ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸಿ , ಹೊಸ ತಲೆಮಾರಿಗೆ ಅಪರಿಚಿತವಾಗಿದ್ದ ಆಷಾಢ ಮಾಸದ ಆಚಾರ ಮತ್ತು ಮಹತ್ವವನ್ನು ತಿಳಿಸುವ ಆಟಿಡೊಂಜಿ ದಿನ ಈಗ ಸಂಸ್ಥೆಗಳಿಂದಾಗಿ ಜನಪ್ರಿಯಗೊಂಡಿರುವುದು ಶ್ಲಾಘನೀಯ ಎಂದರು. ಶಶಿ ಕಿಚನ್ ಯೂಟ್ಯೂಬರ್ ಶಿರ್ವ ಶಶಿಕಲಾ ಕುಲಾಲ್ ಮುಖ್ಯ ಅತಿಥಿಯಾಗಿ ಆಟಿ ತಿಂಗಳ ವೈಶಿಷ್ಟೃ, ಫಾಸ್ಟ್‌ಫುಡ್ ಕುರಿತು ತಿಳಿಸಿದರು.

ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಅಬ್ಬನಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಘುವೀರ್ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಉದಯ ಅಂಚನ್ ಮೊದಲಾದವರಿದ್ದರು.

ಅಬ್ಬನಡ್ಕ ವನದುರ್ಗಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ ಪ್ರಾರ್ಥನೆಗೈದರು. ಫ್ರೆಂಡ್ಸ್ ಕ್ಲಬ್ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ.ಪೂಜಾರಿ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ವರದಿ ವಾಚಿಸಿದರು. ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಪದ್ಮಶ್ರೀ ಸತೀಶ್ ಪೂಜಾರಿ ವಂದಿಸಿದರು.

ಲೀಲಾ ಜತೊಟ್ಟು, ಅಮಣಿ ಆಚಾರ್ಯ, ಸಂಜೀವಿ ಆಚಾರ್ಯ ಅವರು ತುಳು ಪಾಡ್ದನ ಹಾಡಿದರು. ಸಂಘ ಬಾಲ ಪ್ರತಿಭೆ ನಿಯಾ ಶೆಟ್ಟಿ ಸುಮಾರು 50 ತುಳು ಗಾದೆಗಳನ್ನು ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸದಸ್ಯೆ ಆರತಿ ಕುಮಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net