

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಚೆನ್ನಮಣೆ ಆಟ ತುಳುನಾಡಿನ ಬದುಕು ಹಾಗೂ ಸಂಸ್ಕೃತಿಯ ಪ್ರತೀಕ. ಆಧುನಿಕ ಆಟಗಳ ಅಬ್ಬರಕ್ಕೆ ಮರೆಯಾಗುತ್ತಿರುವ ಗ್ರಾಮೀಣ ಆಟಗಳನ್ನು ಸ್ಪರ್ಧೆಯಾಗಿ ಉತ್ತೇಜಿಸುವ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನಾರ್ಹ ಎಂದು ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ.ಪುಷ್ಪಗಿರಿ ಹೇಳಿದರು. ತುಳುನಾಡು ಒಕ್ಕೂಟ ಸಂಘಟನೆ ನೇತೃತ್ವದಲ್ಲಿ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಭಾನುವಾರ ಐದನೇ ವರ್ಷದ ಚೆನ್ನೆಮಣೆ ಗೊಬ್ಬು ಪಂಥೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತುಳುನಾಡು ಒಕ್ಕೂಟ ಅಧ್ಯಕ್ಷ ಶೇಖರ್ ಗೌಡತ್ತಿಗೆ ಮಾತನಾಡಿ, ಶ್ರೇಷ್ಠ ಭಾಷೆಗಳಲ್ಲಿ ತುಳು ಕೂಡ ಒಂದು. ಜಗತ್ತನ್ನು ಆಳುವ ಶಕ್ತಿ ತುಳುನಾಡಿನವರಿಗೆ ಇದೆ. ಚೆನ್ನೆಮಣೆ ಮನೆಯಲ್ಲಿ ಇರುವುದೇ ಪ್ರತಿಷ್ಠೆ, ಮನೆಯ ಹಿರಿಮೆಯ ಧ್ಯೋತಕ ಎಂದರು. ಕರಂಬಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ಮಾತನಾಡಿದರು. ನಾಟಿ ವೈದ್ಯೆ ರೋಹಿಣಿ ಅವರನ್ನು ಗೌರವಿಸಲಾಯಿತು. ತುಳುನಾಡು ಒಕ್ಕೂಟ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ಜಯಂತಿ ಸುಧಾಕರ್, ಪತ್ರಕರ್ತ ಚೈತ್ರೇಶ್ ಇಳಂತಿಲ, ಬೆಳ್ತಂಗಡಿ ತಾಲೂಕು ಒಕ್ಕೂಟ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು, ಅರವಿಂದ ಪಂಡಿತ್ ಇದ್ದರು. ಶಿಫಾನಿ ಬಿರ್ವ, ಅವನಿ ಬಿರ್ವ ಪ್ರಾರ್ಥಿಸಿದರು. ಉದಯ ಗೋಳಿಯಂಗಡಿ ಸ್ವಾಗತಿಸಿದರು. ಒಕ್ಕೂಟ ಸದಸ್ಯ ನವೀನ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಸುರೇಶ್ ವಿ. ವಂದಿಸಿದರು. ತುಳುನಾಡು ಒಕ್ಕೂಟ ತಾಲೂಕು ಕಾರ್ಯದರ್ಶಿ ರಾಜು ಬಿ.ಎಚ್. ಕಾರ್ಯಕ್ರಮ ನಿರೂಪಿಸಿದರು.
ನಮ್ಮ ಪರಂಪರೆ ಉಳಿಸುವಲ್ಲಿ ಚೆನ್ನೆಮಣೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ತುಳು ಭಾಷೆ, ತುಳು ಪರಂಪರೆ ಬಗ್ಗೆ ಚಿಂತನೆ ಮಾಡುತ್ತಿರುವುದು ಭವಿಷ್ಯದ ತುಳು ಬೆಳವಣಿಗೆಗೆ ಆಶಾದಾಯಕವಾಗಿದೆ. ಶೈಲೇಶ್ ಆರ್.ಜೆ, ತುಳುನಾಡು ಒಕ್ಕೂಟ ಸ್ಥಾಪಕಾಧ್ಯಕ್ಷ