

ಉಪ್ಪಿನಂಗಡಿ: ಸಂಸ್ಕಾರಯುತ ಜೀವನದಿಂದ ಹಿಂಸಾರಹಿತ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಉಪ್ಪಿನಂಗಡಿಯ ವರ್ಷೊದ ಉಚ್ಚಯ ಬೊಕ್ಕ ಆಟಿದ ಮದಿಪು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಸುರೇಶ್ ರೈ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಅಧ್ಯಕ್ಷ ಕರುಣಾಕರ ಸುವರ್ಣ, ಒಡಿಯೂರು ಗ್ರಾಮ ವಿಕಾಸ ಯೋಜನೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಮಲ್ಲಿಕಾ ಜಯರಾಮ ಶೆಟ್ಟಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಸುರೇಶ್ ಅತ್ರಮಜಲು, ರಾಮಚಂದ್ರ ಮಣಿಯಾಣಿ, ಎನ್.ಉಮೇಶ್ ಶೆಣೈ, ರಮೇಶ್ ಎನ್., ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಕೈಲಾರ್ ರಾಜಗೋಪಾಲ ಭಟ್, ವಿದ್ಯಾಧರ ಜೈನ್, ಶಶಿಧರ್ ರೈ, ವಿಶ್ವನಾಥ ರೈ, ಶಾಂತಾ ವಿ. ಶೆಟ್ಟಿ, ವಿನಯಾ ಆರ್. ರೈ, ಶರತ್ ಕೋಟೆ, ಚಂದ್ರಶೇಖರ್ ಮಡಿವಾಳ, ಕೃಷ್ಣಪ್ರಸಾದ್ ದೇವಾಡಿಗ, ಮಾಧವಿ ರೈ, ಸುಜಾತ ರೈ, ಆನಂದ ರೈ, ಭವನೇಶ್ವರಿ ರೈ, ದೇವರಾಜ್ ಉಪಸ್ಥಿತರಿದ್ದರು. ಸಮಾಜಸೇವಾ ನೆಲೆಯಲ್ಲಿ ಹೊನ್ನಪ್ಪ ಗೌಡ ವರೆಕ್ಕಾ, ಆರೋಗ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೈದ ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಪದಾಧಿಕಾರಿಗಳಾದ ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಸುಧಾಕರ ಶೆಟ್ಟಿ ವಂದಿಸಿದರು. ಕಿಶೋರ್ ಕುಮಾರ್ ಜೋಗಿ ಮತ್ತು ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.
ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂಬ ಮಾತು ಇಂದಿನ ದಿನಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿರುವುದು ಕಳವಳಕಾರಿ. ಋತುಗಳಾಧಾರಿತ ಆಹಾರ ಪದ್ಧತಿ ಅನುಸರಿಸುತ್ತಿದ್ದ ನಮ್ಮ ಹಿರಿಯರು ಆರೋಗ್ಯ ಕಾಪಾಡಿಕೊಂಡಿದ್ದರು. ಇಂದು ನಾಲಗೆ ರುಚಿಯ ಆಹಾರದತ್ತ ಗಮನಹರಿಸಿ ಅನಾರೋಗ್ಯ ಹಣ ಕೊಟ್ಟು ಖರೀದಿಸುವ ಸ್ಥಿತಿ ಬಂದಿರುವುದು ದುಃಖಕರ. ಮಾತೆಯರು ಕರ್ತವ್ಯ ನಿಷ್ಠೆಯಿಂದ ಪಾಲಿಸಿ ಉತ್ತಮ ಮನೆ ನಿರ್ಮಿಸಲು ಮುಂದಾಗಬೇಕು. ಶ್ರೀ ಗುರುದೇವಾನಂದ ಸ್ವಾಮೀಜಿ