ಸವಿತಾ ಸಮಾಜದಿಂದ ಆಟಿ ೧೮ ಆಚರಣೆ

savitha samaja
Published on

ಮಡಿಕೇರಿ: ತಾಲೂಕು ಸವಿತಾ ಸಮಾಜ ಮಡಿಕೇರಿ ಇದರ ವತಿಯಿಂದ ಆಟಿ ೧೮ ವಿಶೇಷ ಕಾರ್ಯಕ್ರಮವನ್ನು ಮಡಿಕೇರಿಯ ಬಾಲ ಭವನದಲ್ಲಿ ಇತ್ತೀಚೆಗೆ ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸವಿತಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಆರ್.ಬಿ.ವಸಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಮ್ಮನಮ್ಮ ಸಮಾಜದ ಆಚರಣೆಗಳು ಕ್ಷೀಣಿಸುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜಬಾಂಧವರನ್ನು ಒಗ್ಗೂಡಿಸಿ ನಮ್ಮ ಸಂಪ್ರದಾಯದ ಆಚಾರ, ವಿಚಾರವನ್ನು ಮುನ್ನಡೆಸುವಂತಾಗಬೇಕು ಎಂದರು.


ಜಿಲ್ಲಾಧ್ಯಕ್ಷ ದೊರೇಶ್ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಬೆಳೆಯುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲೆಡೆ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದರು.


ತಾಲೂಕು ಸವಿತಾ ಸಮಾಜ ಅಧ್ಯಕ್ಷ ಎಂ.ಟಿ.ಮದು ಮಾತನಾಡಿ, ಸಮಾಜದ ಸಂಘಟನೆಯಾಗಬೇಕಾದರೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು.


ಕ್ರೀಡಾ ಅಧ್ಯಕ್ಷ ಮಧು ಚೆಟ್ಟಿಮಾನಿ ಮಾತನಾಡಿ, ಮುಂದಿನ ದಿನಗಳಲ್ಲಿ ಕ್ರೀಡೆ ಮುಖಾಂತರ ಎಲ್ಲರನ್ನು ಸೇರಿಸುವ ಪ್ರಯತ್ನ ಮಾಡಬೇಕು. ಇದರಿಂದ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷೆ ಸುಂದರಮ್ಮ, ಗೌರವ ಅಧ್ಯಕ್ಷ ಈರಪ್ಪ ಹಾಗೂ ನಗರ ಅಧ್ಯಕ್ಷ ಸಂದೇಶ ಉಪಸ್ಥಿತರಿದ್ದರು. ಅವಿನಾಶ್ ಬೊಟ್ಲಪ್ಪ ಕಾರ್ಯಕ್ರಮ ನಿರೂಪಿಸಿದರೆ, ಮಧು ಚೆಟ್ಟಿಮಾನಿ ಸರ್ವರನ್ನು ಸ್ವಾಗತಿಸಿ, ಎಂ.ಟಿ.ಮಧು ವಂದಿಸಿದರು.


ಆಟಿ ಕಾರ್ಯಕ್ರಮದ ವಿಶೇಷವಾಗಿ ಸಮಾಜದ ಬಂಧುಗಳಿಗೆ ಒಳಾಂಗಣ ಕ್ರೀಡಾಕೂಟ ನಡೆಯಿತು. ಬಲೂನ್ ಮುಖಾಂತರ ವಾಟರ್ ಕಪ್‌ಅನ್ನು ಪಿರಮಿಡ್ ಮಾಡುವುದು, ಸ್ಟ್ರಾದಲ್ಲಿ ಥರ್ಮಾಕೋಲ್ ಬಾಲ್ಸ ಅನ್ನು ಬ್ಯಾಲೆನ್ಸ್ ಮಾಡುವುದು ಹೀಗೆ ವಿವಿಧ ರೀತಿಯ ಒಳಾಂಗಣ ಕ್ರೀಡಾಕೂಟ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಟಿ ವಿಶೇಷವಾಗಿ ಸುಮಾರು ೨೭ ಬಗೆಯ ತಿನಿಸುಗಳ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net