

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ವೈದ್ಯಕೀಯ ಶಿಬಿರ
ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ದ.ಕ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಸದಸ್ಯರಿಗಾಗಿ 53ನೇ ಉಚಿತ ನೇತ್ರ ತಪಾಸಣಾ, ದಂತ ಚಿಕಿತ್ಸಾ ಮತ್ತು ವೈದ್ಯಕೀಯ ಶಿಬಿರ ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ನಡೆಯಿತು.
ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಹಾಗೂ ಮಾತಾ ಅಮೃತಾನಂದಮಯಿ ಮಠ ಬೋಳೂರು ಇದರ ಸಹಯೋಗದಲ್ಲಿ ನಡೆದ ಶಿಬಿರದವನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಕೆ. ಕೃಷ್ಣ ಉದ್ಘಾಟಿಸಿದರು. ಸಹಕಾರಿ ಸಂಸ್ಥೆಗಳು ಕೇವಲ ಲಾಭದ
ದೃಷ್ಟಿ ಹೊಂದದೆ ಸಾರ್ವಜನಿಕರಿಗೆ ಉಚಿತ ವ್ಯೆದಕೀಯ ತಪಾಸಣೆ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತಾನಾಡಿ ಸಂಘದ ವತಿಯಿಂದ ನಡೆಸುತ್ತಿರುವ 53 ನೇ ಉಚಿತ ಆರೋಗ್ಯ ಶಿಬಿರ ಇದಾಗಿದ್ದು 15000 ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದಿದ್ದಾರೆ. 10 ಸಾವಿರ ಮಂದಿಗೆ ಉಚಿತ ಕನ್ನಡಕ ವಿತರಿಸಲಾಗಿದೆ ಎಂದರು.
ಕೆಎಂಸಿಯ ಪ್ರೊಫೆಸರ್ ಡಾ.ಅಶೋಕ್ ಶೆಣೈ , ಶ್ರೀನಿವಾಸ ಇನ್ಸ್‌ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನ ಡಾ. ಕೆ.ವಿದ್ಯಾ ಭಟ್ , ದ.ಕ.ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೀತಾರಾಮ್ .ಎನ್., ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಶೀನ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಸಂಘದ ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಆನಂದ್ ಎಸ್ ಕೊಂಡಾಣ, ಗೋಪಾಲ.ಎಂ., ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಮಾತಾ ಅಮೃತಾನಂದಮಯಿ ಮಠದ ಡಾ.ಸುಚಿತ್ರಾ ಸೊರಕೆ , ಡಾ. ದೇವದಾಸ್, ಲಿಯೋ ಕ್ಲಬ್ ನ ಅಧ್ಯಕ್ಷ ಕ್ರಿಸ್ಟಲಿಸ್, ಲಯನ್ಸ್ ಕ್ಲಬ್ ಕಾರ್ಯದಶಿ ರಾಜೇಶ್ ವಿಕ್ಟರ್ ಹೆರ‌್ರಿ, ಖಜಾಂಜಿ ಶಿವರಾಮ ರೈಉಪಸ್ಥಿತರಿದ್ದರು. ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.