ದಿವಗಿಯಲ್ಲಿ ‘ಅಘನಾಶಿನಿ ನದಿಗೆ ಆರತಿ’ ಭಾನುವಾರ

KMT AGHANASHINI ARATI
Published on

ಕುಮಟಾ: ತಾಲೂಕಿನ ದಿವಗಿಯಲ್ಲಿ ಅಘನಾಶಿನಿ ನದಿಗೆ ಫೆ. 16ರ ಸಂಜೆ 6 ಗಂಟೆಗೆ ಅತಿವಿಶಿಷ್ಟವಾದ ಕಾಶಿಯ ಗಂಗಾರತಿ ಮಾದರಿಯಲ್ಲಿ ಅಘನಾಶಿನಿ ಆರತಿ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಘನಾಶಿನಿ ನದಿಗೆ ಮೂರನೇ ಬಾರಿಗೆ ಮಾಡುತ್ತಿರುವ ಆರತಿ ಕಾರ್ಯಕ್ರಮಕ್ಕೆ ಮೂಡಬಿದಿರೆಯ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಶ್ರೀಗಳು, ಬಳ್ಕೂರ ಯಕ್ಷಿಚೌಡೇಶ್ವರಿ ದೇವಾಲಯದ ಮಾದೇವ ಸ್ವಾಮಿ, ಉದ್ಯಮಿ ಜಗದೀಶ ಸುರೇಶ ಭಟ್, ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಇತರರು ಉಪಸ್ಥಿತರಿರಲಿದ್ದಾರೆ ಎಂದರು.

ದಿವಗಿಯ ಹೇಮಂತಕುಮಾರ ಗಾಂವಕರ ಮಾತನಾಡಿ, ಅಘನಾಶಿನಿ ನದಿಯೊಟ್ಟಿಗೆ ಲಕ್ಷಾಂತರ ಜನರ ಬದುಕು ತಳುಕು ಹಾಕಿಕೊಂಡಿದೆ. ಅಂತಹ ನದಿಗೆ ಶ್ರದ್ಧೆ, ಗೌರವ ಸಮರ್ಪಣೆಯ ಆರತಿಯನ್ನು ದಿವಗಿ ಗ್ರಾಮದಲ್ಲಿ ಹಮ್ಮಿಕೊಂಡಿರುವುದು ಒಳ್ಳೆಯ ವಿಚಾರ. ತಾಲೂಕಿನ ಎಲ್ಲೆಡೆಯಿಂದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಬಂದು ಅಘನಾಶಿನಿ ಆರತಿಯ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದು ಕೋರಿದರು.

ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ಸಚಿನ್ ಭಂಡಾರಿ, ಸದಸ್ಯರಾದ ಗೌರೀಶ ನಾಯ್ಕ, ಲಕ್ಷ್ಮೀಕಾಂತ ಮುಕ್ರಿ, ದಿವಗಿ ಗ್ರಾಮದ ಸುಭಾಷ ಅಂಬಿಗ, ಗಣಪತಿ ಅಂಬಿಗ, ವಿನೋದ ಅಂಬಿಗ, ಆನಂದು ದೇಶಭಂಡಾರಿ, ಪ್ರಶಾಂತ ಅಂಬಿಗ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net