

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಹೂವು, ಸಿಹಿ ನೀಡಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಅಡಹಳ್ಳಿ, ಕೊಕಟನೂರ, ಸುಟ್ಟಟ್ಟಿ, ಝುಂಜರವಾಡ, ಕೋಹಳ್ಳಿ, ಕಟಗೇರಿ, ನಂದಗಾಂವ, ಶಿರಹಟ್ಟಿ, ಹಲ್ಯಾಳ, ದರೂರ, ಸಂಕೋನಟ್ಟಿ, ಘಟನಟ್ಟಿ, ಸವದಿ, ರಡ್ಡೇರಹಟ್ಟಿ, ನಾಗನೂರ ಪಿ.ಕೆ ಸೇರಿ ಹಲವು ಗ್ರಾಮಗಳಲ್ಲಿ ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಮಕ್ಕಳನ್ನು ಆರತಿ ಬೆಳಗಿ ಹೂವು ನೀಡಿ ಸ್ವಾಗತಿಸಲಾಯಿತು. ಕೆಲ ಗ್ರಾಮಗಳಲ್ಲಿ ಎತ್ತಿನ ಗಾಡಿ ಸಿಂಗರಿಸಿ ವಿದ್ಯಾರ್ಥಿಗಳನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆತರುವುದು ವಿಶೇಷವಾಗಿತ್ತು.
ಮಧ್ಯಾಹ್ನ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ಊಟ ಬಡಿಸಲಾಯಿತು. ಅಡಹಳ್ಳಿ ಪಿಡಿಒ ಭುವನೇಶ್ವರಿ ಹಿರೇಮಠ. ಎಸ್.ಕೆ. ಶಾಸ್ತ್ರಿ, ಬಿ.ಡಿ.ಮುಲಿಮನಿ, ಅನಿಲ ಮೇಲಿನಕೇರಿ, ಎಸ್.ಜಿ. ಮಾಳಿ, ಎಸ್.ಎಂ.ಹೊನವಾಡ, ಪ್ರಕಾಶ ಪೂಜಾರಿ, ಮಹಾಂತೇಶ ನಾವಿ, ಡಿ.ಬಿ.ಪೂಜಾರಿ, ಮಹಾಂತೇಶ ಪಾಟೀಲ, ಅನಂತ ಪತ್ತಾರ ಇತರರಿದ್ದರು.