

ಹುಬ್ಬಳ್ಳಿ: ಕಾರ್ತಿಕ ದೀಪೋತ್ಸವ ನಿಮಿತ್ತ ಪದ್ಮಾವತಿ ಮಹಿಳಾ ಮಂಡಳ ವತಿಯಿಂದ ಹಳೇ ಹುಬ್ಬಳ್ಳಿಯ ಅಕ್ಕಿಪೇಟೆಯ ಪಾರ್ಶ್ವನಾಥ ದಿಗಂಬರ ಜೈನ ದೇವಾಲಯದಲ್ಲಿ ಸೋಮವಾರ ಮಹಿಳಾ ಮಂಡಳದ ಸದಸ್ಯರಿಗೆ ಆರತಿ ತಟ್ಟೆ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿತ್ತು.
ತಟ್ಟೆಯಲ್ಲಿ ಧಾರ್ಮಿಕ ರಂಗೋಲಿ ಬಿಡಿಸಿಕೊಂಡು ಮಹಿಳೆಯರು ಬಂದಿದ್ದರು. ಕುಸುಮಾ ಹೂಲಿ (ಪ್ರಥಮ), ನಯನಾ ತಾಳಿಕೋಟಿ (ದ್ವಿತೀಯ), ಚೈತ್ರ ಶಿರಗುಪ್ಪಿ (ತೃತೀಯ), ಜಯಶ್ರೀ ಎರೇಸೀಮೆ ಹಾಗೂ ಜ್ಯೋತಿ ನೆಲವಿಗಿ ಸಮಾಧಾನಕರ ಬಹುಮಾನ ಪಡೆದರು. ದಿಗಂಬರ ಜೈನ ಸಮಾಜದ ಅಧ್ಯಕ್ಷ ವಿಮಲ್ ತಾಳಿಕೋಟಿ, ತವನಪ್ಪ ಶಿರಗುಪ್ಪಿ, ಪದ್ಮಾವತಿ ಮಹಿಳಾ ಮಂಡಳದ ಅಧ್ಯಕ್ಷೆ ಸುಧಾ ಶಿರಗುಪ್ಪಿ ಬಹುಮಾನ ವಿತರಿಸಿದರು.