

ಹುಬ್ಬಳ್ಳಿ: ಅಪ್ಪಟ ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಂದ ತಯಾರಾದ ಹೊಸ ಚಲನಚಿತ್ರ "ಆರಂಭ'ದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಜುಲೈ 2ರಂದು ಸಂಜೆ 4 ಗಂಟೆಗೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಏರ್ಪಡಿಸಲಾಗಿದೆ ಎಂದು ಚಿತ್ರದ ಪೋಷಕ ಸುನಿಲ ಮಠಪತಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್, ಮಾಜಿ ಸಚಿವ ಲಕ್ಷ$್ಮಣ ಸವದಿ ಅತಿಥಿಗಳಾಗಿ ಪಾಲ್ಗೊಳ್ಳುವರು. ನಿರ್ಮಾಪಕ ಸಾಂಭಯ್ಯ ಆಚಾರ್ಯ ಅಧ್ಯಕ್ಷತೆ ವಹಿಸುವರು. ಚಿತ್ರನಟರು, ನಾಯಕ ನಟಿಯರು, ಕಲಾವಿದರು ಪಾಲ್ಗೊಳ್ಳುವರು ಎಂದರು.
ಹುಬ್ಬಳ್ಳಿಯ ಶ್ರೀ ಕಾಳಿಕಾದೇವಿ ಪ್ರೋಡಕ್ಶನ್ ಅಡಿ ಮಂಜುನಾಥ ಆಚಾರ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಆರಂಭ ಚಿತ್ರವು ನಿಗೂಢ ಚಿತ್ರಕತೆ ಹೊಂದಿದೆ. ಮೊದಲ ಬಾರಿ ಉತ್ತರ ಕರ್ನಾಟಕದ ಕಲಾವಿದರು ಸೇರಿ ತಯಾರಿಸಿದ್ದಾರೆ. ಮೂರು ಹಾಡುಗಳಿದ್ದು, ಒಂದನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ಚಿತ್ರವು ರಾಜ್ಯಾದ್ಯಂತ 40ಕ್ಕೂ ಹೆಚ್ಚು ಥೇಟರ್ಗಳಲ್ಲಿ ಜುಲೈ 7ರಂದು ಬಿಡುಗಡೆಯಾಗಲಿದೆ. ಕಲಾವಿದರನ್ನು ಪ್ರೋತ್ಸಾಹಿಸಲು ಜನರು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.