ನವನಗರದಲ್ಲಿ ರಾಘವೇಂದ್ರರ ಆರಾಧನೆ

Worship Festival from 31st
ರಾಘವೇಂದ್ರ ಸ್ವಾಮಿಗಳು.
Published on

ಹುಬ್ಬಳ್ಳಿ: ಇಲ್ಲಿಯ ನವನಗರದ ಶ್ರೀ ರಾಘವೇಂದ್ರ ಭಕ್ತ ಮಂಡಳಿ ಆಶ್ರಯದಲ್ಲಿ ಆ. 31ರಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಏರ್ಪಡಿಸಲಾಗಿದೆ.

ನವನಗರದ ಪರಿಮಳ ಮಾರ್ಗದಲ್ಲಿರುವ ಶ್ರೀ ಮುಖ್ಯಪ್ರಾಣ ದೇವರ ಹಾಗೂ ಶ್ರೀ ಗುರು ರಾವೇಂದ್ರ ಸ್ವಾಮಿ ವೃಂದಾವನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಗುರುವಾರ ಪೂರ್ವಾರಾಧನೆ, ಶುಕ್ರವಾರ ಮಧ್ಯಾರಾಧನೆ, ಶನಿವಾರ ಉತ್ತರಾರಾಧನೆ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತ, ಸೇವಾ ಸಂಕಲ್ಪ, ಅಲಂಕಾರ, ಹಸ್ತೋದಕ, ತೀರ್ಥ ಪ್ರಸಾದ, ಪಲ್ಲಕ್ಕಿ ಸೇವೆಗಳು ನಡೆಯಲಿವೆ.

ಶನಿವಾರ ಬೆಳಗ್ಗೆ ರಥಾಂಗ ಹೋಮ, ಬೆಳಗ್ಗೆ 10.30ಕ್ಕೆ ರಥೋತ್ಸವ ನಡೆಯಲಿದೆ. ನಿತ್ಯ ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ರಾಘವೇಂದ್ರ ಭಕ್ತ ಮಂಡಳಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net