

ಬೆಂಗಳೂರು: ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷರಾಗಿ ಡಾ.ಸತೀಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಚಂದ್ರ ಸಿ, ಸಂಘಟನಾ ಕಾರ್ಯದರ್ಶಿಗಳಾಗಿ ಜಗದೀಶ್ ಬಾಬು, ಅಶೋಕ್ ಮೃತ್ಯುಂಜಯ, ಶಶಿಧರ್ ಸಿ. ಆರಾಧ್ಯ, ವಿಶ್ವನಾಥ ಟಿ.ಜಿ. ನೇಮಕಗೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಉಸ್ತುವಾರಿಯಾಗಿ ಕಮ್ರಾನ್, ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ, ಸಂಘಟನಾ ಸಂಪರ್ಕ ಮತ್ತು ತರಬೇತಿ ಉಸ್ತುವಾರಿ ರವಿಕುಮಾರ್ ಎಸ್., ಕಾರ್ಯದರ್ಶಿಗಳಾಗಿ ಭವ್ಯಾ ಭಸವರಾಜ, ಮಹಾಲಕ್ಷ್ಮೀ, ಮೊಹಮ್ಮದ್ ಅನಸ್ ನೇಮಕ ಮಾಡಲಾಗಿದೆ.
ಯುವಘಟಕದ ಅಧ್ಯಕ್ಷರಾಗಿ ಉಮೇಶ್ ಬಾಬು ಪಿಳ್ಳೇಗೌಡ, ಯುವಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಬಿ.ಆರ್., ವೈದ್ಯರ ಘಟಕದ ಅಧ್ಯಕ್ಷರಾಗಿ ಡಾ.ಕೇಶವ ಕುಮಾರ್, ವಕೀಲರ ಘಟಕದ ಅಧ್ಯಕ್ಷರಾಗಿ ಮಂಜುನಾಥ್ ಗೌಡ, ಮಹಿಳಾ ಘಟಕದ ಅಧ್ಯಕ್ಷರಾಗಿ ವೀಣಾ ಸೆರಾವೊ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸುಹಾಸಿನಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಫಿರೋಜ್ ಖಾನ್, ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಗ್ರೆಗ್ ಡಿ ಸಾ, ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷರಾಗಿ ಸಿದ್ದು, ಎಸ್ಸಿ-ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮುನೇಂದ್ರ ಪಿ., ಆಟೋ ಘಟಕದ ಅಧ್ಯಕ್ಷರಾಗಿ ಅನಿಲ್, ವಿದ್ಯಾರ್ಥಿಗಳ ಘಟಕದ ಅಧ್ಯಕ್ಷರಾಗಿ ಅದ್ನಾನ್ ಆರ್ಿ ಬೇಗ್ ಅವರು ನೇಮಕಗೊಂಡಿದ್ದಾರೆ.
ಪಕ್ಷದ ರಾಜ್ಯಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ನಗರ ಘಟಕದ ಎಲ್ಲ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.