ಗೃಹ ಸಚಿವ ಅಮಿತ್ ಷಾ ವಿರುದ್ಧ ಕ್ರಮ ಕೈಗೊಳ್ಳಿ, ಆಮ್‌ಆದ್ಮಿ ಪಕ್ಷದಿಂದ ರಾಷ್ಟ್ರಪತಿಗೆ ಮನವಿ

AAP PROTEST AMIT SHA
ವಿಜಯಪುರ ಜಿಲ್ಲಾಡಳಿತಕ್ಕೆ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಭೋಗೇಶ ಸೋಲಾಪುರ, ಸಂಜು ಶಟಗಾರ, ಕಾಮಣ್ಣ ಗಂಗನಳ್ಳಿ, ಸುಧಾಕರ ಕನಮಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸಂಸತ್ ಅಧಿವೇಶನದಲ್ಲಿ ಕೇಂದ್ರ ಗ್ರಹ ಸಚಿವ ಅಮಿತ್ ಷಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಮಾತನಾಡಿರುವುದು ಅವಹೇಳನಕಾರಿಯಾಗಿದೆ. ಹೀಗಾಗಿ ಷಾ ನಡೆಗೆ ತೀವ್ರವಾಗಿ ಖಂಡಿಸುವುದಾಗಿ ಆಮ್‌ಆದ್ಮಿ ಪಕ್ಷದ ಕಾರ್ಯಕರ್ತರು ತಿಳಿಸಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸಚಿವ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಮಾತನಾಡಿ, ಸಂಸತ್ತಿನ ರಾಜ್ಯಸಭೆ ಕಲಾಪದಲ್ಲಿ ಗೃಹ ಸಚಿವ ಅಮಿತ್ ಷಾ ಅವರು ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಅವಹೇಳನಕಾರಿ ಭಾಷಣ ಮಾಡಿರುವುದು ಅತ್ಯಂತ ಖಂಡನೀಯ. ದೇಶದ 145 ಕೋಟಿ ರಾಷ್ಟ್ರದ ಜನತೆ ಇದನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಬಿಜೆಪಿ ಪಕ್ಷದ ಅಂತರಂಗವನ್ನು ಅಮಿತ್ ಷಾ ಬಹಿರಂಗಗೊಳಿಸಿದ್ದಾರೆ. ಬಾಬಾಸಾಹೇಬ್ ಅವರು ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸತ್‌ನಲ್ಲಿ ನಿಂತು ಅವಹೇಳನಕಾರಿ ಭಾಷಣ ಮಾಡಿರುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮನಃಸ್ಥಿತಿಯನ್ನು ಅನಾವರಣಗೊಳಿಸುತ್ತದೆ ಎಂದರು.

ಕೇಂದ್ರದಲ್ಲಿ ಬಿಜೆಪಿಗೆ ಸಾಥ್ ಕೊಟ್ಟು ಸರ್ಕಾರ ರಚನೆ ಮಾಡುವುದಕ್ಕೆ ಸಹಾಯ ಮಾಡಿದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಗಳು ಅಮಿತ್ ಷಾವರ ಹೇಳಿಕೆಯನ್ನು ಸಮರ್ಥಿಸಲಿವೆಯಾ? ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಸಂಜು ಶಟಗಾರ, ಕಾಮಣ್ಣ ಗಂಗನಳ್ಳಿ, ಸುಧಾಕರ ಕನಮಡಿ, ಆಮೀರ್ ಸೊಹೈಲ್ ಪಟೇಲ್, ಮೀರಾಸಾಬ್ ದಳವಾಯಿ, ಯೂಸುಫ್ ಪಟೇಲ್, ಇಂದ್ರಜಿತ್ ಜಾಧವ್, ಯಶವಂತ್ ಜಾಧವ್, ಅಹಿಂದ ಮುಖಂಡ ಮಲ್ಲು ಬಿದ್ರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net