

ಹುಬ್ಬಳ್ಳಿ: ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬದ ಹಿನ್ನೆಲೆಯಲ್ಲಿ ಕಮರಿಪೇಟೆಯ ಶ್ರೀರಾಮ ಶಾಲಾ ಅವರಣದಲ್ಲಿರುವ ಕಮರೆಮ್ಮ ಹಾಲ್ ನಲ್ಲಿ ಸೋಮವಾರ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.
ನಗರದ ಜನರ ಸಹಕಾರದಿಂದ ಸತತ ನಾಲ್ಕು ವರ್ಷ ಯಶಸ್ವಿಯಾಗಿ ಆಕಾಶ ಬುಟ್ಟಿ ಹಬ್ಬ ಆಚರಿಸಲಾಗಿದೆ. ಇದೀಗ ಐದನೇ ವರ್ಷದ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು.
ಹಬ್ಬ ಆಚರಣೆ ಹಿನ್ನೆಲೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಜು ಜರತಾರಘರ, ಪ್ರಧಾನ ಕಾರ್ಯದಶಿರ್ಯಾಗಿ ದೇವದಾಸ ಹಬೀಬ, ಸಂಚಾಲಕರಾಗಿ ಪ್ರಕಾಶ ಬುರಬುರೆ, ಸಹ ಸಂಚಾಲಕರಾಗಿ ಪ್ರವಿಣ ಪವಾರ ಆಯ್ಕೆಯಾದರು.
ಮಾಜಿ ಶಾಸಕ ಅಶೋಕ ಕಾಟವೆ, ಸುಭಾಸಸಿಂಗ ಜಮಾದಾರ, ವೆಂಕಟೇಶ ಕಾಟವೆ, ವಿಠ್ಠಲ ಲದವಾ, ಭಾಸ್ಕರ ಜಿತೂರಿ, ರಂಗಾ ಬದ್ದಿ, ಯಲ್ಲಪ್ಪ ಬದ್ದಿ, ಮಂಜುನಾಥ ಕಾಟಕರ್, ಮಿಥುನ ಚವ್ಹಾಣ, ಪ್ರತಿಭಾ ಪವಾರ, ವಿನಾಯಕ ಲದವಾ, ರಾಘು ಪವಾರ, ವಿಜಯ ಬಾಕಳೆ, ಸಚಿನ್ ಕಾಟವೆ, ಮುಂತಾದವರು ಉಪಸ್ಥಿತರಿದ್ದರು.