

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಕಾಶವಾಣಿ ಧಾರವಾಡ ಕೇಂದ್ರ 75 ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ. ಇದು ಕೋಟ್ಯಂತರ ಜನರ ಹೃದಯ ತಲುಪಿದೆ. ಆಕಾಶವಾಣಿ ಮತ್ತು ಅಂಚೆ ಇಲಾಖೆಗಳು ಭಾರತೀಯ ಐತಿಹಾಸಿಕ ಪರಂಪರೆಯ ಹೆಗ್ಗುರುತು. ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಐಕಾನ್‌ಗಳನ್ನು ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಬದ್ಧವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಸೃಜನಾ ರಂಗಮAದಿರದಲ್ಲಿ ಸೋಮವಾರ ಆಯೋಜಿಸಿದ್ದ ಆಕಾಶವಾಣಿ ಧಾರವಾಡ ಕೇಂದ್ರದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರೇಡಿಯೋ ಮೂಲಕವೇ ದೇಶ- ರಾಜ್ಯಗಳ ವಿದ್ಯಮಾನ ತಿಳಿದುಕೊಳ್ಳುವ ಕಾಲ ಇತ್ತು. ಹೀಗಾಗಿ ಪ್ರದೇ ಸಮಾಚಾರ ನಿತ್ಯ ಕೇಳುತ್ತಿದ್ದೆ. ಮಹಿಳಾ ರಂಗ, ಮಾವು ಮಲ್ಲಿಗೆ, ವನಿತಾ ವಿಹಾರ, ಗೃಹಲಕ್ಷ್ಮೀ ಕಾರ್ಯಕ್ರಮ, ಗಿಳಿವಿಂಡು, ಕೃಷಿ ರಂಗ, ರೇಡಿಯೋ ಡಾಕ್ಟರ್, ಸಾಮಾಜಿಕ ಸಂದೇಶ ಕೊಡುವ ನಾಟಕಗಳು ಪ್ರಸಾರ ಆಗುತ್ತಿದ್ದವು. `ಕರಿಎತ್ತ ಕಾಳಿಂಗ ಬಿಳಿಎತ್ತ ಮಾನಿಂಗ' ಗೀತೆ ಹಾಗೂ ರೇಡಿಯೋ ಆರಂಭಕ್ಕೂ ಮುಂಚೆ ಕೇಳುತ್ತಿದ್ದ ಸಿಗ್ನೇಚರ್ ಟ್ಯೂನ್ ಇಂದಿಗೂ ಅನುರಣಿಸುತ್ತದೆ ಎಂದು ಸಚಿವ ಜೋಶಿ 50 ವರ್ಷಗಳ ಹಿಂದಿನ ನೆನಪುಗಳನ್ನು ಹಂಚಿಕೊ0ಡರು.
ಅನೇಕ ಕಾರ್ಯಕ್ರಮಗಳು ಪ್ರಕೃತಿಯ ಬಗ್ಗೆಯೂ ಕಾಳಜಿಯನ್ನು ಹೆಚ್ಚಿಸುತ್ತಿದ್ದವು. ಪಂ. ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಬೇಂದ್ರೆಯ0ಥವರನ್ನು ಪರಿಚಯಿಸಿ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಿದ್ದು ಆಕಾಶವಾಣಿ. ಭಾರತೀಯ ಸಂಸ್ಕೃತಿಯಲ್ಲೂ ಆಕಾಶವಾಣಿಗೆ ವಿಶೇಷ ಅರ್ಥ ಇದೆ. ನಾಡು- ನುಡಿಯ ಬಗ್ಗೆ ಜಾಗೃತಿ ಮೂಡಿಸಿ, ಜಾನಪದಕ್ಕೆ ಅವಕಾಶ ಕಲ್ಪಿಸಿದ್ದು ಆಕಾಶವಾಣಿ. ಪ್ರಧಾನಿ ಮೋದಿಯವರು ಮನ್ ಕಿ ಬಾತ್ ಮೂಲಕ ದೂರದ ಜನರನ್ನು ತಲುಪುತ್ತಿದ್ದಾರೆ ಎಂದರು.
ಬೆಳಗಾವಿ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ನಮ್ಮದು ಚಿಕ್ಕೋಡಿ ತಾಲೂಕಿನ ಕೊನೇ ಹಳ್ಳಿ. ನಮ್ಮಲ್ಲಿ ಆಕಾಶವಾಣಿ ಬರುತ್ತಿರಲಿಲ್ಲ. ಪೇಟೆಧಾರಣೆ ಕೇಳಲು ಹರಸಾಹಸ ಪಡಬೇಕಾಗಿತ್ತು. ಪ್ರದೇಶ ಸಮಾಚಾರ ನನ್ನ ನೆಚ್ಚಿನ ಕಾರ್ಯಕ್ರಮವಾಗಿತ್ತು. ಧಾರವಾಡ ಜಿಲ್ಲೆಯ ಭೀಮಸೇನ ಜೋಶಿ, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್ ಹಾಗೂ ಸವಾಯಿ ಗಂಧರ್ವರ0ಥ ಪಂಚರತ್ನಗಳು ಬೆಳಕಿಗೆ ಬಂದಿದ್ದು ಆಕಾಶವಾಣಿಯಿಂದ ಎಂಬುದು ಹೆಮ್ಮೆಯ ಸಂಗತಿ. ಕರಿಯತ್ತ ಕಾಳಿಂಗ, ಬಿಳಿಯತ್ತ ಮಾನಿಂಗ ಗೀತೆಯ ಗಂಟೆಯ ಸದ್ದು ಇಂದಿಗೂ ಅನುರಣಿಸುತ್ತದೆ. ಆಕಾಶವಾಣಿಯ ತರಂಗಾ0ತರ ಹೆಚ್ಚಿಸಿ ಹೆಚ್ಚಿಸಿ ಬೆಳಗಾವಿಯ ಗಡಿಭಾಗಕ್ಕೂ ಪ್ರಸಾರವಾಗುವಂತೆ ಮಾಡಬೇಕು ಎಂದು ಸಚಿವ ಜೋಶಿ ಅವರಲ್ಲಿ ಬೇಡಿಕೆ ಇಟ್ಟರು.
ಇದೇವೇಳೆ ಗಣ್ಯರು `ಅಮರವಾಣಿಯ ಅಮೃತ ಘಳಿಗೆ' ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ, ಆಕಾಶವಾಣಿ ನಿಲಯ ಉಪ ಮಹಾನಿರ್ದೇಶಕ ಅರುಣ ಪ್ರಭಾಕರ ವೇದಿಕೆಯಲ್ಲಿದ್ದರು.