

ಮೈಸೂರು: ನಗರದ ಆಕಾಶ್ ಎಜುಕೇಷನ್ ಸರ್ವೀಸಸ್ ಲಿಮಿಟೆಡ್(ಎಇಎಸ್‌ಎಲ್) ಸಂಸ್ಥೆಯ ಮಹತ್ವಾಕಾಂಕ್ಷಿಗಳಲ್ಲೊಂದಾದ 2024ನೇ ಸಾಲಿನ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆ (ಎಎನ್‌ಟಿಎಚ್‌ಇ) ಆಯೋಜಿಸಿದ್ದು, ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್, ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆಯ ಕರ್ನಾಟಕ ದಕ್ಷಿಣ ವಲಯದ ಶಾಖೆಗಳ ಹಿರಿಯ ಸಹಾಯಕ ನಿರ್ದೇಶಕ ಜೆ.ಅನಿಲ್‌ಕುಮಾರ್ ಹೇಳಿದರು.
ಕುವೆಂಪುನಗರದ ಆಕಾಶ್ ಶಾಖೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆಯ ನೋಂದಣಿಗೆ ಚಾಲನೆ ನೀಡಿ ಮಾತನಾಡಿದರು.
ನೀಟ್ ಪರೀಕ್ಷೆಗೆ ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ಮೈಸೂರಿನ 165ಕ್ಕೂ ಹೆಚ್ಚು ವಿದ್ಯಾರ್ಥಿಗಳು 500 ಅಂಕಗಳಿಸಿದ್ದಾರೆ. ಆಂತೆಯಲ್ಲಿ ತೇರ್ಗಡೆ ಹೊಂದಿದ್ದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದರು.
ಎಎನ್‌ಟಿಎಚ್ ಪರೀಕ್ಷೆಗೆ 200 ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿದ್ದು, ಆನ್‌ಲೈನ್‌ನಲ್ಲಿ ಅ.19ರಿಂದ 27ರವರೆಗೆ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ, ಆಫ್‌ಲೈನ್‌ನಲ್ಲಿ ಅ.20ರಿಂದ 27ರವರೆಗೆ ಬೆಳಗ್ಗೆ 10.30ರಿಂದ 11.30ರವರೆಗೆ ಪರೀಕ್ಷೆ ನಡೆಯಲಿದೆ. ನೋಂದಣಿ ಮಾಡಿಕೊಳ್ಳಲು ಆಫ್‌ಲೈನ್ ಪರೀಕ್ಷೆ ಇನ್ನೂ 7 ದಿನ ಇರುವಾಗ, ಆನ್‌ಲೈನ್‌ನಲ್ಲಿ ಮೂರು ದಿನಗಳು ಇರುವಾಗ ನೋಂದಣಿಗೆ ಕೊನೆಯ ದಿನವಾಗಿದೆ ಎಂದರು.
ಶೇ.100 ರವರೆಗೂ ವಿದ್ಯಾರ್ಥಿ ವೇತನ ಸಿಗಲಿದೆ. 7 ರಿಂದ 10ನೇ ತರಗತಿಯ 10 ಟಾಪರ್, 11, 12ನೇ ತರಗತಿಯ ಟಾಪರ್ 50 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ರಾಷ್ಟ್ರಿಯ ಹಾಗೂ ರಾಜ್ಯ ಮಟ್ಟದ ಜತೆಗೆ ಈ ಬಾರಿ ಜಿಲ್ಲಾ ಮಟ್ಟದ ಶ್ರೇಣಿ ತಿಳಿದುಕೊಳ್ಳುವ ವ್ಯವಸ್ಥೆ ಇರಲಿದೆ. 5 ವಿದ್ಯಾರ್ಥಿಗಳು ಯುಎಸ್‌ಎ ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್‌ಗೆ ಸಂಪೂರ್ಣ ಉಚಿತವಾದ 5 ದಿನಗಳ ಪ್ರವಾಸ ಗೆಲ್ಲುವ ಅವಕಾಶ ಇದೆ ಎಂದು ಹೇಳಿದರು.
anthe.aakash.ac.in ನಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿ ಅಥವಾ ಅವರ ಪಾಲಕರು ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಹತ್ತಿರದ ಆಕಾಶ್ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಸಾಮರ್ಥ್ಯ ಹಾಗೂ ಸ್ಪರ್ಧಾತ್ಮಕ ಆಕಾಂಕ್ಷಿಗಳ ನಡುವೆ ಇರುವಂತಹ ಅಂತರವನ್ನು ಹೋಗಲಾಡಿಸಿ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಎಎನ್‌ಟಿಎಚ್ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ಪ್ರಾರಂಭಿಸಲಾಗಿತ್ತು, ಹಲವಾರು ವಿದ್ಯಾರ್ಥಿಗಳು ಕಳೆದ 15 ವರ್ಷಗಳಿಂದ ಪ್ರತಿ ವರ್ಷವೂ ಈ ಪರೀಕ್ಷೆಯನ್ನು ಬರೆದು ಇಂಜಿನಿಯರ್ ಹಾಗೂ ವೈದ್ಯರಾಗುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ ಎಂದರು.
ಸಹಾಯಕ ನಿರ್ದೇಶಕ ಡಾ.ವಿಕ್ರಂ ಚಕ್ರವರ್ತಿ, ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಸಂಜೀವ್ ಝಾ, ಕುವೆಂಪುನಗರ ಶಾಖೆಯ ವ್ಯವಸ್ಥಾಪಕ ಅನಿಲ್‌ಕುಮಾರ್, ಮೈಸೂರು ಸಬ್ ಅರ್ಬನ್ ಶಾಖೆಯ ವ್ಯವಸ್ಥಾಪಕ ದೀಪಕ್ ಇದ್ದರು.