ಹುಬ್ಬಳ್ಳಿ: ನಗರದ ಅನಂತ ಪ್ರೇರಣಾ ಕೇಂದ್ರದ ಆಶ್ರಯದಲ್ಲಿ ರೋಟರಿ ಕ್ಲಬ್ ಪೂರ್ವ ಹಾಗೂ ಸುನಿಧಿ ಕಲಾ ಸೌರಭ ಸಂಸ್ಥೆಗಳು ಸಂಯುಕ್ತವಾಗಿ ಆಕಾಶಬುಟ್ಟಿ ತಯಾರಿಕಾ ಶಿಬಿರವನ್ನು ಆಯೋಜನೆ ಮಾಡಿವೆ.
ಇಲ್ಲಿಯ ವಿಜಯನಗರದ ಕೆಂಪಣ್ಣವರ ಕಲ್ಯಾಣ ಮಂಟಪ ಹತ್ತಿರದ ಅನಂತ ಪ್ರೇರಣಾ ಕೇಂದ್ರದಲ್ಲಿ ಅ. 4ರಿಂದ ಮೂರು ದಿನಗಳ ಕಾಲ ಮಧ್ಯಾಹ್ನ 1ರಿಂದ ಸಂಜೆ 5ರ ವರೆಗೆ ಶಿಬಿರ ನಡೆಯಲಿದೆ.
15 ವರ್ಷ ಮೆಲ್ಪಟ್ಟ ವಯೋಮಾನದವರಿಗಾಗಿ ಆಕಾಶ ಬುಟ್ಟಿ ತಯಾರಿಕೆ ಶಿಬಿರವು ನಡೆಯಲಿದೆ. ಶಿಬಿರಾರ್ಥಿಗಳಿಗೆ ವಿವಿಧ ನಮೂನೆಯ ಆಕಾಶ ಬುಟ್ಟಿ ತಯಾರಿಸುವ ವಿಧಾನವನ್ನು ಕಲಿಸಿ ಕೊಡಲಾಗುವುದು.
ಅ. 4ರಂದು ಮಧ್ಯಾಹ್ನ 1ಕ್ಕೆ ಡಿಸೋಜ ಬೈಜಿಲ್ ಶಿಬಿರದ ಉದ್ಘಾಟನೆ ನೆರವೇರಿಸುವರು. ಅತಿಥಿಗಳಾಗಿ ರೋಟರಿ ಕ್ಲಬ್ ಹುಬ್ಬಳ್ಳಿ ಪೂರ್ವ ಅಧ್ಯಕ್ಷೆ ಜೋಸ್ನಾ ಕಡಕೋಳ, ಲಕ್ಷ್ಮಣರಾವ್ ಓಕ್, ಸುಭಾಸ್ ನರೇಂದ್ರ ಹಾಗೂ ಸ್ವಾತಿ ಪಟ್ಟೇದ ಆಗಮಿಸಲಿದ್ದಾರೆ. ವೀಣಾ ಅಠವಲೆ ಸಂಚಾಲಕತ್ವದಲ್ಲಿ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.