ಆಕಾಶ್ ದಿಂದ ಆಂಥೆ 2024 ಪರೀಕ್ಷೆ, ಆನ್ ಲೈನ್ ನಲ್ಲಿ ಅ. 19ರಿಂದ 27ರ ವರೆಗೆ

IMG_20240809_130319_366.jpg
Published on

ಹುಬ್ಬಳ್ಳಿ: ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್ಎಲ್) ಮಹತ್ವಾಕಾಂಕ್ಷಿ ವಿದ್ಯಾರ್ಥಿವೇತನ ಪರೀಕ್ಷೆ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಂ (ಎಎನ್ ಟಿಎಚ್ಇ- ಆಂಥೆ) ಅನ್ನು ಅಕ್ಟೋಬರ್ 19ರಿಂದ 27ರ ವರೆಗೆ ರಾಷ್ಟ್ರದಾದ್ಯಂತ ಆನ್ ಲೈನ್ ಮೂಲಕ ನಡೆಸಲು ನಿರ್ಧರಿಸಿದೆ ಎಂದು ಸಂಸ್ಥೆಯ ಟೆರಿಟರಿ ಹೆಡ್ ರಾಜೇಶಕುಮಾರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕಾಶ್ ಆಂಥೆ ಆರಂಭವಾಗಿ 15 ವರ್ಷ ರ್ಪೂಣಗೊಂಡಿರುವ ಹಿನ್ನಲೆಯಲ್ಲಿ ಈ ಬಾರಿ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷ 11.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರೆ, ಈ ಬಾರಿ 2 ದಶಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ ಎಂದರು.

7ರಿಂದ 12ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯ ನಂತರ ಶೇ. 100ರ ವರೆಗೆ ವಿದ್ಯಾರ್ಥಿವೇತನ ಪಡೆಯುವ ಅವಕಾಶ ಗಳಿಸಬಹುದು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಯುಎಸ್ಎನ ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್ ಗೆ ಸಂಪೂರ್ಣ ಉಚಿತವಾಗಿ ಕರೆದೊಯ್ಯುವ 5 ದಿನಗಳ ಪ್ರವಾಸ ಕಾರ್ಯಕ್ರಮವೂ ಇದರಲ್ಲಿ ಸೇರಿದೆ ಎಂದು ಹೇಳಿದರು.

ದೇಶದ ವಿದ್ಯಾರ್ಥಿಗಳ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಂಥೆ ಕಳೆದ 15 ವರ್ಷಗಳಿಂದಲೂ ನಿರ್ಣಾಯಕ ಪಾತ್ರ ವಹಿಸುತ್ತ ಬಂದಿದೆ. ಆನ್ ಲೈನ್ ಅಲ್ಲದೇ ಅ. 20 ಹಾಗೂ 27ರಂದು ಆಫ್ ಲೈನ್ ಪರೀಕ್ಷೆಗಳು ಸಹ ನಡೆಯಲಿವೆ ಎಂದರು.

ಆಗಸ್ಟ್ 15ರೊಳಗೆ ಹೆಸರು ನೋಂದಾಯಿಸುವ ವಿದ್ಯಾಥಿರ್ಗಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಆಫ್ಲೈನ್, ಆನ್ ಲೈನ್ ಪರೀಕ್ಷೆಗೆ ಮೂರು ದಿನಗಳ ಮೊದಲು ನೋಂದಾಯಿಸುವುದು ಅಗತ್ಯವಾಗಿದೆ.

ದೇಶಾದ್ಯಂತ ಆಕಾಶ್ ಸಂಸ್ಥೆಯ 315ಕ್ಕೂ ಅಧಿಕ ಕೇಂದ್ರಗಳಲ್ಲಿ ಆಫ್ ಲೈನ್ ಪರೀಕ್ಷೆ ನಡೆಯಲಿವೆ. ಆನ್ಲೈನ್ ಪರೀಕ್ಷೆಗಳನ್ನು ಅ. 19 ರಿಂದ 27ರ ವರೆಗೆ ಎಕ್ಸಾಂ ವಿಂಡೋದಲ್ಲಿ ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದಾಗಿದೆ.

10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ನ. 8ರಂದು, 7ರಿಂದ 9ನೇ ತರಗತಿ ನ. 13 ಮತ್ತು 11 ಮತ್ತು 12ನೇ ತರಗತಿ ಫಲಿತಾಂಶ ನ. 16ರಂದು ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

ಆಂಥೆ ಪರೀಕ್ಷೆ ಕುರಿತ ಕರಪತ್ರ, ಪ್ರಚಾರ ಲಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಹುಬ್ಬಳ್ಳಿ ಶಾಖೆ ಮುಖ್ಯಸ್ಥ ಮಹಾಂತೇಶ ಕರವೀರಮಠ, ಏರಿಯಾ ಸೇಲ್ಸ್ ಹೆಡ್ ಗಿರೀಶ ದುರ್ಗದಮಠ, ವಿಜಯಕುಮಾರ, ಮಂಜುನಾಥ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net