ಆದಿರಂಗದಲ್ಲಿ ದೇವತಾ ಪ್ರತಿಷ್ಠಾಪನೆ ಇಂದಿನಿಂದ

IMG-20230902-WA0055-1.jpg
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಲೋಹಿಯಾನಗರದ ಆದಿ ರಂಗ ಥೇಟರ್ಸ ಆವರಣದಲ್ಲಿರುವ ಭಕ್ತಿ ರಂಗದಲ್ಲಿ ದೇವತಾ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಆರಂಭವಾಗಿದ್ದು, ಸೆ. 3ರಂದು ವಿವಿಧ ಧಾರ್ಮಿಕ ವಿಧಾನಗಳು ನಡೆಯಲಿದೆ.

ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ನಟಲಿಂಗೇಶ್ವರ-, ಶ್ರೀ ನಂದಿ, ಶ್ರೀ ಕಲಾಗಣಪತಿ,- ಶ್ರೀ ಶಕ್ತಿಮಾರುತಿ ವಿಗ್ರಹಗಳನ್ನು ಹೊಸಪೇಟೆಯ ಶಿಲ್ಪಿ ಸುರೇಶ ಆಚಾರ ಇವರಿಂದ ತಯಾರಾಗಿದ್ದು, ಧಾರವಾಡದ ಉದಯ ದೇಸಾಯಿ ಇವರು ದೇಣಿಗೆ ನೀಡಿದ್ದಾರೆ. ಈ ಮೂರ್ತಿಗಳ ಶೋಭಾಯಾತ್ರೆ ಶನಿವಾರ ಸಡಗರದಿಂದ ನಡೆಯಿತು.

ಭಾನುವಾರ ಬೆಳಗ್ಗೆ 8.-30ಕ್ಕೆ ಸಂಕಲ್ಪ, ಪ್ರತಿಷ್ಠೆ ಪೂರ್ವ ವಿಧಿ ವಿಧಾನಗಳು, ಧಾನ್ಯಾಧಿವಾಸ, ಜಲಾಧಿವಾಸ, ಶಯ್ಯಾಧಿವಾಸ, ದೇವತಾಸ್ಥಾಪನ, ನವಗ್ರಹ ಹೋಮ, ವಾಸ್ತು ಹೋಮ, ಪ್ರತಿಷ್ಠೆಪೂರ್ವ ಪರ್ಯಾಯ ಹೋಮ ನಡೆಯಲಿವೆ. ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ.

ಸೆ. 4ರಂದು ಬೆಳಗ್ಗೆ 6ಕ್ಕೆ ದೇವತಾ ಪ್ರತಿಷ್ಠಾಪನ ನಡೆಯಲಿದ್ದು, ಅದ್ವೆತ ಆಶ್ರಮದ ಶ್ರೀ ಪ್ರಣವಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಧಾರವಾಡದ ಬ್ರಹ್ಮಷಿರ್ ರಾಜೇಶ್ವರ ಶಾಸ್ತ್ರೀಗಳು ಮಾರ್ಗದರ್ಶನ ನೀಡುವರು. ಮಧ್ಯಾಹ್ನ ದೇವರಿಗೆ ಆರತಿ ನೈವೇದ್ಯ ಮಹಾಪ್ರಸಾದ ನಡೆಯಲಿದೆ.

ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭಾಪತಿ ಬಸವರಾಜ ಹೊರಟ್ಟಿ, ಉಪಮೇಯರ್ ಸತೀಶ ಹಾನಗಲ್ಲ, ಉದ್ಯಮಿ ನಂದಕುಮಾರ, ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ ಪಾಲ್ಗೊಳ್ಳುವರು.

ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಡಾ. ಸಹನಾ ಪ್ರದಿಪ ಭಟ್ಟ ತಂಡದವರಿಂದ ನೃತ್ಯ ರೂಪಕ "ಸತಿ ಪಾರ್ವತಿ' ಪ್ರದರ್ಶನ ನಡೆಯಲಿದೆ ಎಂದು ಆಯೋಜಕರಾದ ಜೀವನ ಫರ್ನಾಂಡಿಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net