

ಕುಮಟಾ: ತಾಲೂಕು ಸೌಧದಲ್ಲಿರುವ ಆಧಾರ ಸೇವಾ ಕೇಂದ್ರವು ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದ್ದು 10-15 ದಿನಗಳಲ್ಲಿ ಸರಿಯಾಗುವ ನಿರೀಕ್ಷೆ ಇದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ನಮ್ಮ ಕಚೇರಿಯಲ್ಲಿದ್ದ ಆಧಾರ ಸೇವಾ ಕೇಂದ್ರದಲ್ಲಿನ ಆಪರೇಟರ್ ಲಾಗಿನ್ ಐಡಿ ಲಾಕ್ ಆಗಿದೆ. ಶೀಘ್ರ ಲಾಕ್ ತೆರೆಯಲು ಸಂಬಂಧಿತ ಜಿಲ್ಲಾ ಸಮಾಲೋಚಕರಿಗೆ ತಿಳಿಸಿದ್ದೇವೆ. ಆದರೂ ಲಾಗಿನ್ ಐಡಿ ಪುನಃ ತೆರೆಯಲ್ಪಡಲು ಕನಿಷ್ಠ 10-15 ದಿನ ಕಾಲಾವಕಾಶ ಬೇಕಾಗಬಹುದು ಎಂದು ತಿಳಿದು ಬಂದಿದೆ. ಅಲ್ಲಿಯವರೆಗೆ ಸಾರ್ವಜನಿಕರು ಆಧಾರ ಅಪ್‌ಡೇಟ್ ಸಂಬಂಧಿತ ಕೆಲಸ ಕಾರ್ಯಗಳಿಗಾಗಿ ಪಟ್ಟಣದ ಮುಖ್ಯ ಅಂಚೆ ಕಚೇರಿ ಹಾಗೂ ಬ್ಯಾಂಕ್ ಆಫ್ ಬರೋಡಾದ ಆಧಾರ ಸೇವಾ ಕೇಂದ್ರಗಳನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.