

ಹೊನ್ನಾಳಿ: ಮನೆಯೊಡತಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರಬೇಕಾದರೆ ಕಡ್ಡಾಯವಾಗಿ ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಆಗಿರಬೇಕು ಎಂದು ತಹಸೀಲ್ದಾರ್ ಪಟ್ಟರಾಜಗೌಡ ತಿಳಿಸಿದರು.
ಮಂಗಳವಾರ ತಾಲೂಕಿನ ಸುಂಕದಕಟ್ಟೆಯ ವೃದ್ಧೆ ಸಾವಿತ್ರಮ್ಮ, ನನಗೆ ಗೃಹಲಕ್ಷ್ಮೀ ಯೋಜನೆ ಮಂಜೂರಾಗಿದೆ. ಆದರೆ, ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಸಿಡಿಪಿಒ ಕಚೇರಿಗೆ ಸಂಪರ್ಕಿಸಿ ಈ ಬಗ್ಗೆ ವಿವರಿಸಿದಾಗ ಬ್ಯಾಂಕ್‌ಗೆ ಆಧಾರ್‌ಕಾರ್ಡ್ ಲಿಂಕ್ ಆಗಿಲ್ಲ ಎಂದು ತಿಳಿದುಬಂತು. ಹಾಗಾಗಿ, ಈ ಕೂಡಲೇ ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಮಾಡಿಸಿ ಎಂದರು.
ಜತೆಗೆ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೆ. 27ರಂದು ರೈತರ ಸಂಪರ್ಕ ದಿನ ನಿಗದಿ ಮಾಡಲಾಗಿದೆ. ರೈತರಿಗೆ ಸಂಬಂಧಪಟ್ಟ ಪಹಣಿ, ಖಾತೆ ಹಾಗೂ ಇನ್ನಿತರ ಇಲಾಖೆ ಸಮಸ್ಯೆಗಳಿದ್ದರೆ ಪರಿಹರಿಸಲು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಹೊನ್ನಾಳಿ ತಾಪಂ ಸಾಮರ್ಥ್ಯಸೌಧದಲ್ಲಿ ಏರ್ಪಡಿಸಲಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜಗೌಡ ತಿಳಿಸಿದ್ದಾರೆ.