ವಿವಾಹ ನೋಂದಣಿಗೆ ಆಧಾರ್ ಮಾನದಂಡವಲ್ಲ

ದೇವನಹಳ್ಳಿಯ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಚಾಲನೆ ನೀಡಿದರು. ತಹಸೀಲ್ದಾರ್ ಎಚ್. ಬಾಲಕೃಷ್ಣ, ತಾಪಂ ಇಒ ಶ್ರೀನಾಥ್‌ಗೌಡ, ನಿರೂಪಣಾಧಿಕಾರಿ ಅನಿತಾಲಕ್ಷ್ಮೀ, ಮೇಲ್ವಿಚಾರಕಿ ಅರುಣಾ, ಟಿಎಚ್‌ಒ ಸಂಜಯ್, ಜಾಲಿಗೆ ನರಸಿಂಹಮೂರ್ತಿ ಇದ್ದರು.
A.26 dhl Makkala Aayoga Adyksha News- ph-2 A
ದೇವನಹಳ್ಳಿಯ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಚಾಲನೆ ನೀಡಿದರು. ತಹಸೀಲ್ದಾರ್ ಎಚ್. ಬಾಲಕೃಷ್ಣ, ತಾಪಂ ಇಒ ಶ್ರೀನಾಥ್‌ಗೌಡ, ನಿರೂಪಣಾಧಿಕಾರಿ ಅನಿತಾಲಕ್ಷ್ಮೀ, ಮೇಲ್ವಿಚಾರಕಿ ಅರುಣಾ, ಟಿಎಚ್‌ಒ ಸಂಜಯ್, ಜಾಲಿಗೆ ನರಸಿಂಹಮೂರ್ತಿ ಇದ್ದರು.
Published on

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಹೇಳಿಕೆ

ದೇವನಹಳ್ಳಿ: ನೋಂದಣಿ ಕಚೇರಿಯಲ್ಲಾಗಲಿ, ಬೇರೆ ಎಲ್ಲೇ ಆಗಲಿ ವಿವಾಹವಾಗುವವರ ವಯಸ್ಸಿನ ದೃಢೀಕರಣಕ್ಕೆ ಆಧಾರ್ ಕಾರ್ಡ್ ಮಾನದಂಡವಲ್ಲ, ಅದರ ಬದಲಿಗೆ ಜನನ ಪ್ರಮಾಣ ಪತ್ರ ಅಥವಾ ಶಾಲಾ ದಾಖಲಾತಿಯ ಪತ್ರವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ
ಸೋಮವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು, ಈ ಬಗ್ಗೆ ಸಾರ್ವಜನಿಕರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಯಾವುದೇ
ಗೊಂದಲಕ್ಕೆ ಅವಕಾಶವಿಲ್ಲದಂತೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಹುಡುಗನಿಗೆ 21 ವರ್ಷ ತುಂಬದಿದ್ದರೆ ಬಾಲ್ಯವಿವಾಹ ಕಾಯ್ದೆ
1929ರ ಪ್ರಕಾರ ಮದುವೆಯಾಗುವಂತಿಲ್ಲ. 18 ವರ್ಷದೊಳಗಿನ ಎಲ್ಲರೂ ಮಕ್ಕಳೇ. ಎಲ್ಲ ಮಕ್ಕಳಿಗೂ ದುರ್ಬಳಕೆ ಮತ್ತು ಶೋಷಣೆಯ ವಿರುದ್ಧ ರಕ್ಷಣೆ ನೀಡಬೇಕಾಗುತ್ತದೆ ಎಂದು ಹೇಳಿದರು.
ಮಕ್ಕಳಿಗೆ ಹಕ್ಕು ನೀಡಿದೆ: 18 ವರ್ಷದ ಒಳಗಿನವರು ಸರ್ಕಾರದ ಆದೇಶದಲ್ಲಿ ಜಾರಿಮಾಡಿದ ಮತ್ತು ಅಂತಾರಾಷ್ಟ್ರೀಯ ಕಾಯ್ದೆ ಪ್ರಕಾರ ಅನುಮೋದನೆ ಮಾಡಿದ ನಿಗದಿತ ಜೀವನ ಮಟ್ಟ ಮತ್ತು ಹಕ್ಕುಗಳನ್ನು
ಹೊಂದಲು ಅರ್ಹತೆ ಪಡೆದಿರುತ್ತಾರೆ. ಭಾರತೀಯ ಸಂವಿಧಾನ ಎಲ್ಲ ಮಕ್ಕಳಿಗೆ, ಕೆಲವು ಹಕ್ಕುಗಳನ್ನು ನೀಡಿದೆ. ಕೆಲವನ್ನು ವಿಶೇಷವಾಗಿ ಅದರಲ್ಲಿ ಸೇರಿಸಿದೆ ಎಂದು ಕೆ.ನಾಗಣ್ಣಗೌಡ ತಿಳಿಸಿದರು.
6-14 ರ ಒಳಗಿನ ಎಲ್ಲ ವಯೋಮಾನದ ಮಕ್ಕಳು ಉಚಿತ ಕಡ್ಡಾಯ ಶಿಕ್ಷಣದ ಹಕ್ಕು ಹೊಂದಿದ್ದಾರೆ. ಮಕ್ಕಳಿಗೆ ಮಹಿಳೆಯರಿಗೆ ವಿಶೇಷ ವ್ಯವಸ್ಥೆ ಮಾಡಬೇಕು. ಹುಡುಗರು ಮತ್ತು ಹುಡುಗಿಯರ ವಯಸ್ಸು 18 ವರ್ಷದೊಳಗೆ ಇದ್ದರೆ, ಅವರಿಗೆ ಮದುವೆಯಾಗಿ ಮಕ್ಕಳಾಗಿದ್ದರೂ ಅವರನ್ನು ಮಕ್ಕಳಾಗಿ ಪರಿಗಣಿಸಲಾಗುತ್ತದೆ ಎಂದರು.
ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಮತ್ತು
ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣದತ್ತ ಗಮನ ಹರಿಸುವುದು ಮುಖ್ಯ, ಪ್ರತಿವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆ, 18ರಂದು ಮಕ್ಕಳ ದೌರ್ಜನ್ಯ ವಿರೋಧಿ ದಿನ, 20ರಂದು ವಿಶ್ವ ಮಕ್ಕಳ
ದಿನವನ್ನು ನಾವು ಆಚರಿಸುತ್ತಿದ್ದೇವೆ ಎಂದರು. ಮಕ್ಕಳು ಯಾವುದೇ ಕಚೇರಿಗಳಲ್ಲಿ, ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಅವರ ರಕ್ಷಣೆ ಮಾಡಬೇಕು, ಬಾಲ್ಯ ವಿವಾಹಗಳನ್ನು ತಡೆಯುವುದು, ವಯಸ್ಕರ ಮದುವೆಯನ್ನು ನೋಂದಣಿ ಮಾಡುವುದು ಸೂಕ್ತ. ಇದರಿಂದ ಭದ್ರತೆ ದೊರೆಯಲಿದೆ ಎಂದರು.

ಬೀದಿ ನಾಯಿಗಳ ದಾಳಿ ತಪ್ಪಿಸಿ
ಅನೇಕ ಕಡೆಗಳಲ್ಲಿ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿವೆ. ಈ ಬಗ್ಗೆ ಪುರಸಭೆ, ಗ್ರಾಪಂಗಳು ಗಮನಹರಿಸಬೇಕು ಎಂದು ಕೆ.ನಾಗಣ್ಣಗೌಡ ಸೂಚಿಸಿದರು. ಮಹಿಳೆಯರ ರಕ್ಷಣೆಯು ಸವಾಲಾಗಿ ಪರಿಣಮಿಸಿದ್ದು ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಈ ವರ್ಷ ನಡೆದ ಬಾಲ್ಯವಿವಾಹಗಳ ವಿರುದ್ಧ ಕೈಗೊಂಡ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net