ಆ.1ರಂದು ಆಧಾರ್ ತಿದ್ದುಪಡಿ, ನೋಂದಣಿ

aadhaar
Published on

ಸುಳ್ಯ: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ಉಪವಿಭಾಗ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ ಎಜುಕೇಶನಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಅಂಚೆ ಜನಸಂಪರ್ಕ ಅಭಿಯಾನ ಆಗಸ್ಟ್ 1ರಂದು ಬೆಳ್ಳಾರೆಯ ಗ್ರಾಪಂ ಕಟ್ಟಡದ ರಾಜೀವ ಗಾಂಧೀ ಸೇವಾ ಕೇಂದ್ರದಲ್ಲಿ ನಡೆಯಲಿದೆ. ಹೊಸ ಆಧಾರ್ ನೋಂದಣಿ, ಆಧಾರ್ ತಿದ್ದುಪಡಿ ಮತ್ತು ಅಪ್‌ಡೇಟ್ ಸೇವೆಗಳು ಶಿಬಿರದಲ್ಲಿ ನಡೆಯಲಿದ್ದು, ಸಮಗ್ರ ರಕ್ಷಾ ಯೋಜನೆ ಅಪಘಾತ ವಿಮೆ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಹರೀಶ್ ಜಿ.ಅಭಿಯಾನ ಉದ್ಘಾಟಿಸಲಿದ್ದಾರೆ. ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಾಡಲಿಚ್ಚಿಸುವವರು ಜುಲೈ 31ರೊಳಗೆ ಬೆಳ್ಳಾರೆಯ ಬಸ್ ನಿಲ್ದಾಣದ ಎದುರಿನ ಜ್ಞಾನದೀಪ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿ ಅರ್ಜಿ ಪಡೆದುಕೊಳ್ಳುವುದು. 1ರಂದು ಬೆಳಗ್ಗೆ 9ರಿಂದ 10ರವರೆಗೆ ಟೋಕನ್ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net