ಆಧಾರ್ ತಿದ್ದುಪಡಿ, ಆರೋಗ್ಯ ತಪಾಸಣೆ ಶಿಬಿರ

Hbr 03 june 03.a
Published on

ಹೆಬ್ರಿ: ಕುಚೂರು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ, ಅಂಚೆ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಉಚಿತವಾಗಿ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಆರೋಗ್ಯ ತಪಾಸಣೆ ಶಿಬಿರ ಗ್ರಾಪಂ ವಠಾರದಲ್ಲಿ ಮಂಗಳವಾರ ನಡೆಯಿತು.

ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು ವಾತನಾಡಿ, ಸಾರ್ವಜನಿಕರಿಗೆ ಒಂದೇ ಸೂರಿನಡಿಯಲ್ಲಿ ಆಧಾರ್ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಪಂಚಾಯಿತಿ ವತಿಯಿಂದ ನಡೆಸಲಾಗಿದೆ. ಶಾಲೆ ಆರಂಭವಾಗಿರುವುದರಿಂದ ತುರ್ತಾಗಿ ಆಧಾರ್ ಸಂಬಂಧಿಸಿದ ಸೇವೆ ಬೇಕಾಗಿರುವುದರಿಂದ ಪಂಚಾಯಿತಿ ಮುತುವರ್ಜಿ ವಹಿಸಿ ಶಿಬಿರಿ ಆಯೋಜಿಸಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅಂಚೆ ಇಲಾಖೆಯ ಗುರುಪ್ರಸಾದ್, ಆರೋಗ್ಯ ಇಲಾಖೆಯ ಡಾ.ರವಾಮಣಿ ವಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಶಶಿಕಲಾ ಕಾರ್ಯಕ್ರಮ ಉದ್ಘಾಟಿಸಿದರು.

ಅಂಚೆ ಇಲಾಖೆಯ ಅರುಂಧತಿ, ಪಿಡಿಒ ರಿತೇಶ್, ಗ್ರಾಪಂ ಸದಸ್ಯರಾದ ಮಹೇಶ್ ಶೆಟ್ಟಿ, ಸತೀಶ್ ಪೂಜಾರಿ, ರಾವೇಂದ್ರ ಪೂಜಾರಿ, ಸುಕನ್ಯಾ ಕೃಷ್ಣಮೂರ್ತಿ, ಪತ್ರಕರ್ತ ನರೇಂದ್ರ ಎಸ್.ಮರಸಣಿಗೆ, ಸಿಬ್ಬಂದಿ, ಸಾರ್ವಜನಿಕರಿದ್ದರು. ಪಿಡಿಒ ರಿತೇಶ್ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net