

ಸಿಂಧನೂರು: ನಗರದ ತಹಸಿಲ್ ಕಚೇರಿಯ ಆವರಣದಲ್ಲಿರುವ ಆಧಾರ್ ನೋಂದಣಿ ಕೇಂದ್ರವನ್ನು ತಾಂತ್ರಿಕ ಕಾರಣದಿಂದ ಶನಿವಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.
ಆಧಾರ್ ಕಾರ್ಡ್ ಕೇಂದ್ರದ ಮುಂದೆ ಯಾವುದೇ ಮಾಹಿತಿ ಅಂಟಿಸದೆ ಹಾಗೂ ಮುನ್ಸೂಚನೆ ನೀಡದೆ ಇರುವುದರಿಂದ ಬೆಳಗ್ಗೆಯೇ ಬೇರೆ ಬೇರೆ ಗ್ರಾಮ ಹಾಗೂ ನಗರದ ವಿವಿಧ ವಾರ್ಡ್‌ಗಳಿಂದ ಬಂದಿದ್ದ ಸಾರ್ವಜನಿಕರು ಕಾದು ಸುಸ್ತಾದರು.
ವೃದ್ಧರು, ಅಂಗವಿಕಲರು ತೊಂದರೆ ಅನುಭವಿಸಿ ಮನೆಗೆ ನಡೆದರು. ಸಿಬ್ಬಂದಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.