

ಬೈಕ್ ವ್ಹೀಲಿಂಗ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.
ಬೆಲವತ್ತ ಗ್ರಾಮದ ಮಸೀದಿ ರಸ್ತೆಯ ಜಬೀ ಬಂಧಿತ. ಈತ ಯಮಹಾ ಆರ್‌ಎಕ್ಸ್ ಬೈಕ್‌ನಲ್ಲಿ ರಿಂಗ್ ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದ್ದ. ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜು.14ರಂದು ಹಂಚಿಕೊಂಡಿದ್ದ.
ಇದನ್ನು ಆಧರಿಸಿ, ಸಿದ್ಧಾರ್ಥ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೈಕ್‌ನ ನೋಂದಣಿ ಸಂಖ್ಯೆ ಆಧರಿಸಿ, ಬುಧವಾರ ಆತನನ್ನು ಪೊಲೀಸರು ಬಂಧಿಸಿದ್ದಾರೆ.