ಗಾಯಗೊಂಡಿದ್ದ ಯುವಕ ಸಾವು

Published on


ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಗ್ರಾಮದ ಡಾಬಾ ಬಳಿ ಆ.5 ರಂದು ಯುವಕರ ನಡುವೆ ನಡೆದ ಜಗಳದಲ್ಲಿ ಚಾಕು ಇರಿ ತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ.
ತಾಲೂಕಿನ ಬಾಗೂರು ಹೋಬಳಿ ಗೋವಿನಕೆರೆ ಗ್ರಾಮದ ಚಂದ್ರೇಗೌಡ ಎಂಬವರ ಪುತ್ರ ಜಿ.ಸಿ.ಪವನ್ (27)ಮೃತಪಟ್ಟ ಯುವಕ ಪವನ್ ಬಾಗೂರು ಗ್ರಾಮದಲ್ಲಿರುವ ಬಾರ್‌ನಲ್ಲಿ ಕ್ಯಾಷಿಯರ್ ಆಗಿ ಎರಡು ತಿಂಗಳಿಂದ ಕೆಲಸ ಮಾಡುತಿದ್ದ. ಯಾಚೇನಹಳ್ಳಿ ಆನಂದ್, ಓಬಳಾಪುರ ಗ್ರಾಮದ ರವಿ ಹಾಗೂ ಪವನ್ ನಡುವೆ ಜಗಳ ನಡೆದು ಆನಂದ್ ಚಾಕುವಿನಿಂದ ಪವನ್‌ಗೆ ಇರಿದಿದ್ದ. ನಂತರ ಪವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ವಂದಿಸದೆ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net