ಯುವಕನ ಮೇಲೆ ತಂಡದಿಂದ ರಾಡ್‌ನಿಂದ ಹಲ್ಲೆ: ಗಾಂಜಾ ನಶೆಯಲ್ಲಿ ಕೃತ್ಯ ಶಂಕೆ

Published on

ಬಂಟ್ವಾಳ: ಫರಂಗಿಪೇಟೆಯ ಅಮ್ಮೆಮಾರ್ ಎಂಬಲ್ಲಿ ಶುಕ್ರವಾರ ರಾತ್ರಿ ವೇಳೆ ಕೆಲಸ ಬಿಟ್ಟು ಮನೆಗೆ ಬರುತ್ತಿದ್ದ ದಕ್ಕೆಲು ನಿವಾಸಿ ನಿತೇಶ್(30) ಎಂಬುವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು ರಾಡ್‌ನಿಂದ ಹಲ್ಲೆ ನಡೆಸಿದೆ.

ನಿತೇಶ್ ಹೆಲ್ಮೆಟ್ ಧರಿಸಿದ್ದ ಪರಿಣಾಮ ತಲೆಗೆ ಗಾಯವಾಗದೆ ಕೈಗೆ ತಾಗಿದೆ. ಗಾಯಾಳುವನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವ ಕಾರಣಕ್ಕೆ ಹಲ್ಲೆ ನಡೆದಿದೆ ಎಂಬುದು ತಿಳಿದು ಬಂದಿಲ್ಲ, ಈ ಭಾಗದಲ್ಲಿ ಗಾಂಜಾ ವ್ಯವಹಾರ ಹಾಗೂ ಸೇವನೆ ವ್ಯಾಪಕವಾಗಿದ್ದು, ಗಾಂಜಾ ನಶೆಯಲ್ಲಿ ದುಷ್ಕರ್ಮಿಗಳು ಕೃತ್ಯ ಎಸಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಈ ಹಿಂದೆ ಫರಂಗಿಪೇಟೆಯಲ್ಲಿ ಸ್ಟುಡಿಯೋಗೆ ನುಗ್ಗಿ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿ ಈ ಪ್ರಕರಣದಲ್ಲೂ ನೇರ ಭಾಗಿಯಾಗಿರುವುದಾಗಿ ಗಾಯಾಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net