ಪ್ರೀತಿಸುವಂತೆ ಯುವತಿಗೆ ಪೀಡಿಸುತ್ತಿದ್ದ ಯುವಕರ ವಿರುದ್ಧ ಯುವತಿಯ ದೂರು

ಪ್ರೀತಿಸುವಂತೆ ಯುವತಿಗೆ ಪೀಡಿಸುತ್ತಿದ್ದ ಯುವಕರ ವಿರುದ್ಧ ಯುವತಿಯ ದೂರು
Published on

ಮೈಸೂರು: ಪ್ರೀತಿಸುವಂತೆ ಯುವತಿಯನ್ನು ಪೀಡಿಸುತ್ತಿದ್ದ ಯುವಕ ಸೇರಿದಂತೆ ಆತನ ಪಾಲಕರ ವಿರುದ್ಧವೂ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


25 ವರ್ಷದ ಯುವತಿಗೆ ತೊಂದರೆ ನೀಡುತ್ತಿದ್ದ ಯುವಕ ಟಿ.ಕೆ.ನಿಖಿಲ್ ಮತ್ತು ಆತನ ಪಾಲಕರಾದ ಸುಂದರ್ ಮತ್ತು ಸರೋಜಾ ವಿರುದ್ಧ ದೂರು ದಾಖಲಾಗಿದೆ. ‘ನಿಖಿಲ್ ನನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿಸದಿದ್ದರೆ ಕೊಲೆ ವಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮನೆ ಮುಂದೆ ಬಂದು ಜಗಳ ವಾಡಿದ್ದಾನೆ.

ಜತೆಗೆ, ನನ್ನ ಖಾಸಗಿ ಫೋಟೋಗಳನ್ನು ಸಾವಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲ್ಯಾಕ್ ಮೇಲ್ ವಾಡಿ 2 ಲಕ್ಷ ರೂ.ವರೆಗೆ ಹಣ ಪಡೆದಿರುವುದರೊಂದಿಗೆ ನನ್ನ ಸ್ಕೂಟರ್ ಅನ್ನು ಸಹ ಕಿತ್ತು ಕೊಂಡಿದ್ದಾನೆ. ನಿಖಿಲ್‌ಗೆ ಆತನ ಪಾಲಕರು ಸಹ ಬೆಂಬಲ ನೀಡುತ್ತಿದ್ದಾರೆ. ನಿತ್ಯ ತೊಂದರೆ ಕೊಟ್ಟಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.


ಈ ಸಂಬಂಧ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net