3.42 ಲಕ್ಷ ರೂ.ವಂಚಿಸಿದ ಯುವತಿ

cybe crime
Published on

ಹುಬ್ಬಳ್ಳಿ: ಯುವತಿ ಕೊಟ್ಟ ಟಾಸ್ಕ್​ಗಳಿಂದ ಲಾಭದಾಸೆ ಮಾಡಿಕೊಂಡ ಇಲ್ಲಿನ ದೇಶಪಾಂಡೆ ನಗರದ ಪ್ರೀತಂ ಎಸ್. ಎನ್ನುವಾತ ಬರೋಬ್ಬರಿ 3.42 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಪ್ರೀತಂ ವಾಟ್ಸ್​ಆಪ್​ಗೆ ಸಂದೇಶ ಕಳುಹಿಸಿದ ಯುವತಿ, ಎಜೆ ಮಾರ್ಕೆಟಿಂಗ್ ಏಜೆನ್ಸಿ ಎಂದು ಪರಿಚಯಿಸಿಕೊಂಡಿದ್ದಾಳೆ. ಗೂಗಲ್ ರಿವೀವ್​ಗೆ ರೇಟಿಂಗ್ ಕೊಟ್ಟರೆ 50 ರೂ. ಕೊಡುವುದಾಗಿ ನಂಬಿಸಿದ್ದಾಳೆ. 2-3 ರೇಟಿಂಗ್ ಕೊಟ್ಟಿದ್ದಕ್ಕೆ ಟೆಲಿಗ್ರಾಂ ಅಪ್ಲಿಕೇಷನ್ ಮೂಲಕ 150 ರೂ. ಜಮಾ ಮಾಡಿದ್ದಾಳೆ. ವಿವಿಧ ಟಾಸ್ಕ್​ಗಳನ್ನು ನೀಡುತ್ತ ಪ್ರೀತಂ ಅವರ ಯುಪಿಐ ಹಾಗೂ ಬ್ಯಾಂಕ್ ಖಾತೆಯಿಂದ ಒಟ್ಟು 3.42 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾಳೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net