ಬೆಂಗಳೂರಿನ ವಿಜಯೋತ್ಸವದಲ್ಲಿ ಜಿಲ್ಲೆಯ ಯುವತಿ ಸಾವು

00
Published on

ಬೇತಮಂಗಲ: ಬೆಂಗಳೂರಿನಲ್ಲಿ ಬುಧವಾರ ಆರ್​ಸಿಬಿ ವಿಜಯೋತ್ಸವ ಸಂದರ್ಭದಲ್ಲಿನ ನೂಕುನುಗ್ಗಲಿನಲ್ಲಿ ಕೆಜಿಎಫ್​ ತಾಲೂಕಿನ ಬಡಮಾನಹಳ್ಳಿಯ ಸಹನಾ (24) ಮೃತಪಟ್ಟಿದ್ದಾರೆ.

ಬಡಮಾಕನಹಳ್ಳಿ ಸುರೇಶ್​ ಬಾಬು, ಮಂಜುಳಾ ದಂಪತಿಯ ಇಬ್ಬರು ಹೆಣ್ಣುಮಕ್ಕಳಲ್ಲಿ ಹಿರಿಯಳಾದ ಸಹನಾ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಜನಿಯರಿಂಗ್​ ವಿದ್ಯಾಭ್ಯಾಸ ಮುಗಿಸಿ ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿದ್ದರು. ಸ್ನೇಹಿತರೊಂದಿಗೆ ಆರ್​ಸಿಬಿ ವಿಜಯೋತ್ಸದಲ್ಲಿ ಭಾಗವಹಿಸಲು ತೆರಳಿದ್ದಾಗ ಅವಡ ಸಂಭವಿಸಿದ್ದು, ಕಾಲ್ತುಳಿತಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾಳೆ. ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಮೃತದೇಹ ಸಾಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net