ಮ್ಯಾರಥಾನ್‌ನಲ್ಲಿ ಕೊಡಗಿನ ಯುವತಿ ಅಪರೂಪದ ಸಾಧನೆ

ಕರವಟಿರ ಚೈತ್ರ ಪಳಂಗಪ್ಪ
ಕರವಟಿರ ಚೈತ್ರ ಪಳಂಗಪ್ಪ
Published on

ನಾಪೋಕ್ಲು: ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ನಲ್ಲಿ ಕೊಡಗಿನ ಯುವತಿ ಅಪರೂಪದ ಸಾಧನೆ ಮಾಡಿದ್ದಾರೆ.

ಕರವಟಿರ ಚೈತ್ರಾ ಪಳಂಗಪ್ಪ ಡೆಕಥ್ಲಾನ್‌ನಲ್ಲಿ ಕೆಲಸ ಮಾಡುತ್ತ ಕ್ರೀಡೆಗಳೊಂದಿಗೆ ಸುಮಾರು 72 ಕಿಲೋಮೀಟರ್ ಅಂತರದ ಖರ್ದುಂಗ್ಲ ಸವಾಲನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ವಾರ್ಷಿಕ ಲಡಾಕ್ ಮ್ಯಾರಥಾನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಖರ್ದುಂಗ್ಲ 72 ಕಿ.ಮೀ ಅಂತರದ ಓಟವು 71,600 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಪೌರಾಣಿಕ ಖರ್ದುಂಗ ಲಾ ಪಾಸ್ ಸೇರಿದಂತೆ ಅತ್ಯಂತ ಎತ್ತರದ ಭೂ ಪ್ರದೇಶದ ಮೂಲಕ ಹಾದು ಹೋಗಿದೆ.

ಇಂತಹ ಕಠಿಣ ಆಯ್ಕೆಯನ್ನು ಚೈತ್ರಾ ಸವಾಲಾಗಿ ಸ್ವೀಕರಿಸಿ ಯಶಸ್ವಿ ಗೊಳಿಸಿದ್ದಾರೆ. ಈಕೆ ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದ ನಿವಾಸಿ ನಿವೃತ್ತ ಸೈನಿಕ ಕರವಟಿರ ಪಳಂಗಪ್ಪ ಮತ್ತು ಕಾಂತಿ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net