ಆಸ್ಪತ್ರೆ ದಾಖಲಾಗಿದ್ದ ಯುವತಿ ಸಾವು

Published on

ಆನೇಕಲ್: ತಾಲೂಕಿನ ಅತ್ತಿಬೆಲೆಯ ಖಾಸಗಿ ಆಸ್ಪತ್ರೆಗೆ ನಾಲ್ಕು ದಿನದ ಹಿಂದೆ ಜ್ವರ ಎಂದು ದಾಖಲಾಗಿದ್ದ ಯುವತಿ ಶನಿವಾರ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪಾಲಕರು, ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.

ಹೆಬ್ಬಗೋಡಿಯ ಮಮತಾ(29)ಮೃತೆ. ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದದ್ದ ಅವರನ್ನು ಎಕ್ಸರೇ ಮಾಡಿದ ವೈದ್ಯರ ತಂಡ ಹೃದಯ ಸಂಬಂಧಿ ಕಾಯಿಲೆ ಇದೆ, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಬೇಕು ಎಂದಿದ್ದರು. ಆದರೆ, ‘ನಮ್ಮಲ್ಲೇ ವೈದ್ಯರಿದ್ದಾರೆ ಚಿಕಿತ್ಸೆ ಇಲ್ಲೇ ನೀಡುತ್ತೇವೆ’ ಎಂದು ಚಿಕಿತ್ಸೆ ಮುಂದುವರಿಸಿದ್ದಾರೆ. ಆದರೆ ಸಂಜೆ ಮಮತಾ ಪಾಲಕರ ಬಳಿ ಬಂದ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಪಾಲಕರು ಆಕ್ರೋಶ ಹೊರಹಾಕಿದ್ದು, ಚಿಕಿತ್ಸೆಯ ವೈಲ್ಯದಿಂದಲೇ ಯುವತಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಗಲಾಟೆ ಮಾಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ಎಂಬಿಎ ವಿದ್ಯಾಭ್ಯಾಸ ಮುಗಿಸಿ ಸ್ವಂತ ಬಿಜಿನೆಸ್ ಮಾಡುತ್ತಿದ್ದ ಮಮತಾ ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಯುವತಿ ಮೃತಪಟ್ಟಿದ್ದಾರೆ ಎಂದು ಪಾಲಕರು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದರು.

ಸ್ಥಳಕ್ಕೆ ಬಂದ ಅತ್ತಿಬೆಲೆ ಪೊಲೀಸರುಪಾಲಕರನ್ನು ಸಮಾಧಾನ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net