ಬೆಂಗಳೂರಿಗೆ ಹೋದ ಯುವಕ ನಾಪತ್ತೆ

Sul_Ganesh
Published on

ಸುಳ್ಯ: ನಗರದ ಕುರುಂಜಿಗುಡ್ಡೆ ಸುಂದರ ನಾಯ್ಕ ಎಂಬುವರ ಪುತ್ರ ಗಣೇಶ್​ (40) ಎಂಬುವರು ಬೆಂಗಳೂರಿಗೆ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆ. ಗಣೇಶ ಎಂಬುವರು ಕೆಲವರ್ಷದಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು.

ಇತ್ತೀಚೆಗೆ ಊರಿಗೆ ಬಂದಿದ್ದ ಅವರು ಜ.19ರಂದು ಬೆಳಗ್ಗೆ ಸುಳ್ಯದಿಂದ ಬಸ್​ ಏರಿದ್ದರು. ಆದರೆ ಬೆಂಗಳೂರಿನಲ್ಲಿ ವಿಚಾರಿಸಿದಾಗ ತಲುಪಿಲ್ಲ ಎಂದು ತಿಳಿದುಬಂದಿದೆ ಎಂದು ಗಣೇಶರ ತಂದೆ ಸುಳ್ಯ ಪೊಲೀಸ್​ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಚಿತ್ರದಲ್ಲಿ ಇರುವ ವ್ಯಕ್ತಿಯನ್ನು ಕಂಡವರು ಹತ್ತಿರದ ಪೋಲೀಸ್​ ಠಾಣೆಗೆ ತಿಳಿಸುವಂತೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net