ಈಜಲು ಹೋದ ಯುವಕ ಸಾವು

05hgr 01
Published on

ಹಲಗೂರು: ಮುತ್ತತ್ತಿಯ ಆಂಜನೇಯಸ್ವಾಮಿ ದೇವರ ದರ್ಶನ ಪಡೆಯಲು ಭಾನುವಾರ ಸ್ನೇಹಿತರೊಂದಿಗೆ ಬಂದಿದ್ದ ಯುವಕ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದಾಗ ಮೃತಪಟ್ಟಿದ್ದಾನೆ.

ರಾಮನಗರ ಜಿಲ್ಲೆ ದೊಡ್ಡ ಗಂಗಾವಾಡಿ ಬೋರೇಗೌಡ ಅವರ ಪುತ್ರ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ವಾಸಗಿರುವ ಡಿ.ಬಿ.ವಿಶ್ವಾಸ್ (27) ಮೃತರು. ಹಲಗೂರು ಪೊಲೀಸರು ಸೋಮವಾರ ನುರಿತ ಈಜುಗಾರರಿಂದ ಶವವನ್ನು ಶೋಧಿಸಿ ಹೊರತೆಗೆದು ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net