ಹೋರಿ ಸ್ಪರ್ಧೆ ವೀಕ್ಷಣೆಗೆ ತೆರಳಿದ್ದ ಯುವಕ ಸಾವು

bull competition young man death
ಹೋರಿ ತಿವಿದು ಮೃತಪಟ್ಟ ಈಸೂರು ಗ್ರಾಮದ ರಾಮು.
Published on

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ತಲರಘಟ್ಟದಲ್ಲಿ ಹೋರಿ ತಿವಿದು ಯುವಕನೊಬ್ಬ ಮೃತಪಟ್ಟಿದ್ದಾರೆ. ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ರಾಮು (26) ಮೃತ ಯುವಕ.

ತರಲಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಹೋರಿ ಸ್ಪರ್ಧೆ ವೀಕ್ಷಣೆಗೆ ತೆರಳಿದ್ದ ಈತನಿಗೆ ಭಾನುವಾರ ಹೋರಿ ತಿವಿದಿತ್ತು. ಎದೆಯ ಭಾಗಕ್ಕೆ ತಿವಿದು ಗಾಯಗೊಂಡಿದ್ದ ಆತನನ್ನು ತಕ್ಷಣವೇ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಸ್ನೇಹಿತರು ಕರೆದೊಯ್ದಿದ್ದರು. ಆದರೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ವರ್ಷಾರಂಭದಲ್ಲಿ ಹೋರಿ ತಿವಿದು ಮೊದಲ ಬಲಿಯಾದರೆ, ಇದೇ ತರಲಘಟ್ಟ ಗ್ರಾಮದಲ್ಲಿ ಕಳೆದ ವರ್ಷವೂ ಹೋರಿ ಬೆದರಿಸುವ ವೇಳೆ ಹೋರಿ ತಿವಿದು ವ್ಯಕ್ತಿ ಮೃತಪಟ್ಟಿದ್ದ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net