ಹಳೆಯ ಪದಾರ್ಥಗಳನ್ನು ಖರೀದಿಸುವ ನೆಪದಲ್ಲಿ ಬಂದಿದ್ದ ಯುವಕ ಕಳ್ಳತನಕ್ಕೆ ಯತ್ನ

crime
Published on

ಮೈಸೂರು: ವಿಜಯನಗರ ಮೂರನೇ ಹಂತದಲ್ಲಿ ಹಳೆಯ ಪದಾರ್ಥಗಳನ್ನು ಖರೀದಿಸುವ ನೆಪದಲ್ಲಿ ಬಂದಿದ್ದ ಯುವಕ ಕಳ್ಳತನಕ್ಕೆ ಯತ್ನ ನಡೆಸಿದ್ದಾನೆ.

ಸುಂದರ್ ರಾಜ್ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಆಟೋದಲ್ಲಿ ಹಳೆಯ ವಸ್ತುಗಳ ಖರೀದಿಗೆಂದು ಬಂದಿದ್ದ ಯುವಕ ಈ ಕೃತ್ಯ ಎಸಗಿದ್ದಾನೆ.

ಮನೆಯ ಸಿಸಿ ಕ್ಯಾಮೆರಾದಲ್ಲಿ ಯುವಕನ ಕಳ್ಳತನದ ಯತ್ನ ಸೆರೆಯಾಗಿದ್ದು, ಮನೆಯ ಆವರಣದಲ್ಲಿದ್ದ ವಸ್ತುಗಳನ್ನು ತೆಗೆದುಕೊಳ್ಳಲು ಯುವಕ ಯತ್ನಿಸಿರುವುದು ಕಂಡುಬಂದಿದೆ. ವಸ್ತು ಎತ್ತಿಕೊಳ್ಳುತ್ತಿವುದನ್ನು ಸಿಸಿ ಕ್ಯಾಮೆರಾದಲ್ಲಿ ಗಮನಿಸಿದ ಮನೆಯ ಮಾಲೀಕರು ಕೂಗಿದ ವೇಳೆ ತೆಗೆದುಕೊಂಡಿದ್ದ ವಸ್ತುಗಳನ್ನು ಅಲ್ಲಿಯೇ ಬಿಸಾಡಿ ಪರಾರಿಯಾಗಿರುವುದು ಕಂಡುಬಂದಿದೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net