ಕೂಲಿ ಕೆಲಸಕ್ಕೆ ಬಂದ ಯುವಕ ಆತ್ಮಹತ್ಯೆ

Hanging
Published on

ಯಲ್ಲಾಪುರ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊಡ್ಲಗದ್ದೆಯ ತೋಟಗದ್ದೆಯಲ್ಲಿ ನಡೆದಿದೆ.

ಮೂಲತಃ ಧಾರವಾಡ ಜಿಲ್ಲೆಯ ಎತ್ತಿನಗುಡ್ಡದ ಮಂಜುನಾಥ ಭರಮಪ್ಪ ವಾಸುಗೌಡರ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಪಟ್ಟಣದ ರವೀಂದ್ರ ನಗರದಲ್ಲಿ ವಾಸವಿದ್ದ ಈತ ಕೊಡ್ಲಗದ್ದೆಯ ತೋಟಗದ್ದೆಯ ಕೃಷಿಕರೊಬ್ಬರ ಮನೆಗೆ ಕೂಲಿ ಕೆಲಸಕ್ಕೆ ಬಂದಿದ್ದ. ಅವರ ಮನೆಯ ಮಹಡಿಯ ಮೇಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net