ಹಣಕಾಸು ವಿಚಾರ : ಮೈಸೂರಿನಲ್ಲಿ ಯುವಕನಿಗೆ ಚಾಕು ಇರಿತ

Crime Logo
Published on

ಮೈಸೂರು: ರಾಮಕೃಷ್ಣನಗರದಲ್ಲಿ ಹಣಕಾಸು ವಿಚಾರವಾಗಿ ಮಂಗಳವಾರ ಯುವಕನೊಬ್ಬನಿಗೆ ಇಬ್ಬರು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ರಾಮಕೃಷ್ಣನಗರ ಬಡಾವಣೆ ನಿವಾಸಿ, ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಲ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ಪ್ರಜ್ವಲ್(23) ಗಾಯಗೊಂಡ ವಿದ್ಯಾರ್ಥಿ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net